ಸಚಿವ ವಿನಯ ಕುಲಕರ್ಣಿ ಪರ ನಟ ಯಶ್ ರೋಡ್ ಶೋ
Date : 2018-05-05 SHARE
ಧಾರವಾಡ : ಗಣಿ ಸಚಿವ ವಿನಯ ಕುಲಕರ್ಣಿ ಪರ ನಟ ಯಶ್ ರೋಡ್ ಶೋ ನಡೆಸಿದರು. ಧಾರವಾಡ ತಾಲೂಕಿನ ಹೆಬ್ಬಳ್ಳಿ, ಅಮ್ಮನಿಬಾವಿ, ನರೇಂದ್ರ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ಬಳಿಕ ಮಾತನಾಡಿದ ಯಶ್, ಎಲ್ಲರಿಗೂ ನಮಸ್ಕಾರ. ಇಲ್ಲಿಗೆ ತುಂಬಾ ವರ್ಷದ ಹಿಂದೆ ಬಂದಿದ್ದೆ. ನಾನು ಆವಾಗ ಸಿರಿಯಲ್ ನಲ್ಲೂ ಆ್ಯಕ್ಟ್ ಮಾಡಿರಲಿಲ್ಲ. ಇಲ್ಲಿನ ಜನರನ್ನು ನೋಡಿ ತುಂಬಾ ಖುಷಿ ಆಗಿದೆ. ನಾನು ಇಲ್ಲಿ ನಿಂತಿದಿನಿ ಅಂದ್ರೆ ಅದಕ್ಕೆ ಕಾರಣ ನಿಮ್ಮ ಅಭಿಮಾನ ಎಂದರು. ಯಶ್ ಯಾಕೆ ರಾಜಕೀಯ ಪಂಕ್ಷನ್ ಗಳಿಗೆ ಬರ್ತಿದಾರೆ ಅಂತಾ ಎಲ್ಲರೂ ಕೆಳ್ತಾ ಇದಾರೆ. ಅದಕ್ಕೆ ಕಾರಣ ಕೂಡ ಇದೆ. ಜನರ ಸಮಸ್ಯೆಗಳ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೆ. ಕುಡಿಯುವ ನೀರಿನ ಸಮಸ್ಯೆ ತುಂಬ ಇದೆ. ಹೀಗಾಗಿ ಈಗಾಗಲೇ ಒಂದು ಕೆರೆ ಮಾಡಿದ್ದೇನೆ. ಒಂದೇ ಒಂದು ಕೆರೆ ನಿರ್ಮಾಣ ಮಾಡಿ ಮನೆಯಲ್ಲಿ ಕುಳಿತುಕೊಳ್ಳುವ ನಾನಲ್ಲ. ನಿಮ್ಮೆಲ್ಲರ ಋಣ ನಮ್ಮ ಮೇಲಿದೆ. ಎಲ್ಲರೂ ನಮಗೆ ಮುಖ್ಯ. ಕೆಲವು ಲೀಡರ್ಸ್ ಜೊತೆ ಇದ್ರೆ ಸಾಕಷ್ಟು ಪ್ರೊಜೆಕ್ಟ್ ಮಾಡಬಹುದು. ಹೀಗಾಗಿ ನನಗೆ ಪರಿಚಯ ಇದ್ದೋರ ಜೊತೆ ಪ್ರಚಾರ ಮಾಡ್ತಿದಿನಿ ಎಂದರು. ಸಚಿವ ವಿನಯ್ ಕುಲಕರ್ಣಿ ಗೆ ವೊಟ್ ಮಾಡಿ ಅಂತಾ ನಾನು ಹೇಳಲ್ಲ. ನಿಮ್ಮ ಪ್ರೀತಿ ನೋಡಿದ್ರೆ ನೀವು ಮತ ಹಾಕುತ್ತೀರಿ ಎಂದು ಡೈಲಾಗ್ ಹೇಳಿ ಸೇರಿದ್ದ ಜನರನ್ನು ರಂಜಿಸಿದರು.