ಬಿಜೆಪಿ ನಾಯಕರ ವಿರುದ್ದ ಗುಡುಗಿದ ಮುನಿರತ್ನ
Date : 2018-05-14 SHARE
ಬೆಂಗಳೂರು : ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಬಿಜೆಪಿ ನಾಯಕರ ವಿರುದ್ದ ಗುಡುಗಿದ್ದಾರೆ. ನಕಲಿ ಮತದಾರರ ಚೀಟಿ ಸೃಷ್ಟಿ ಹಿಂದೆ ಬಿಜೆಪಿಯ ರಾಕೇಶ್ ಹಾಗೂ ತುಳಸಿ ಮುನಿರಾಜು ಕೈವಾಡವಿದ್ದು, ನನ್ನ ವಿರುದ್ದ ವ್ಯವಸ್ಥಿತ ಪಿತೂರಿ ನಡೆದಿದೆ. ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ನನ್ನನ್ನು ಎದುರಿಸಲಾಗದೆ, ಕಣದಿಂದಲೇ ಹಿಂದೆ ಸರಿಯುವಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ ಎಂದು ಕಣ್ಣೀರು ಹಾಕಿದ ಮುನಿರತ್ನ ರಾಜರಾಜೇಶ್ವರಿ ತಾಯಿ ಎಲ್ಲ ನೋಡುತ್ತಿದ್ದಾಳೆ. ಅವಳು ನನ್ನ ಕೈ ಬಿಡುವುದಿಲ್ಲ. ನಾನು ಒಂದೇ ಒಂದು ಭ್ರಷ್ಟಾಚಾರ, ಒತ್ತುವರಿ, ಅಕ್ರಮ ಅನ್ಯಾಯ ವೆಸಗಿಲ್ಲ. ನನ್ನ ಹದಿನೆಂಟನೇ ವಯಸ್ಸಿನಲ್ಲಿ ತೆರಿಗೆ ಕಟ್ಟಲು ಆರಂಭಿಸಿದ್ದೇನೆ ಎಂದು ಮನದಾಳವನ್ನು ತೋಡಿಕೊಂಡಿದ್ದಾರೆ.