ಲಂಚ ಕೇಳಿದ ಪ್ರಾಚಾರ್ಯರ ಬಂಧನ
Date : 2018-05-14 SHARE
ಹುಬ್ಬಳ್ಳಿ : ಶಾಲೆಯಲ್ಲಿ ಪ್ರವೇಶ ನೀಡಲು 40 ಸಾವಿರ ರೂಪಾಯಿ ಲಂಚ ಕೇಳಿದ ಪ್ರಾಚಾರ್ಯರರನ್ನೇ ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ. ಹೌದು ಇಂತಹ ಘಟನೆ ಹುಬ್ಬಳ್ಳಿಯ ಕೇಂದ್ರಿಯ ವಿದ್ಯಾಲಯದಲ್ಲಿ ನಡೆದಿದ್ದು, ಈ ಸಂಬಂಧ ಶಾಲೆಯ ಪ್ರಾಚಾರ್ಯರನ್ನು ಬಂಧಿಸಲಾಗಿದೆ. ನಗರದ ರಾಜನಗರದ ಕೇಂದ್ರಿಯ ವಿದ್ಯಾಲಯದ ನಂ 1 ಶಾಲೆಯ ಎಸ್ ಟಿ ಮೇತ್ರಿ ಬಂಧಿತ ಪ್ರಾಚಾರ್ಯರಾಗಿದ್ದಾರೆ. ಹುಬ್ಬಳ್ಳಿಯ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಸಿದ್ಧಾರೂಢ ಮೇತ್ರೆ ಅವರು ನಾಲ್ಕನೇಯ ತರಗತಿಗೆ ಪ್ರವೇಶ ನೀಡಲು ಬಸವರಾಜ ಎಂಬುವರ ಬಳಿ 50 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಹೀಗಾಗಿ ಬಸವರಾಜ್ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಸಿಬಿಐ ಅಧಿಕಾರಿಗಳು ಲಂಚ ಕೇಳಿದ್ದ ಪ್ರಾಚಾರ್ಯನನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ 7ರ ಅಡಿಯಲ್ಸಿ ಮೇತ್ರೆ ವಿರುದ್ದ ದೂರು ದಾಖಲಿಸಿಕೊಂಡ ಸಿಬಿಐ. ಹುಬ್ಬಳ್ಳಿಯ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರನ್ನು ತನಿಖೆಗೆ ಒಳಪಡಿಸಿದ್ದಾರೆ.