FOR BEST NEWS & ADVERTISEMENT CONTACT PRAJAKIRAN - 9341197609
  • ಪ್ರಮಾಣ ವಚನಕ್ಕೆ ಗೈರು ಹಾಜರಾದ ಪ್ರತಾಪ ಗೌಡ, ಆನಂದ್ ಸಿಂಗ್


    Date : 2018-05-19 SHARE

    ಬೆಂಗಳೂರು: ವಿಧಾನಸಭೆಯ ಕಾರ್ಯ ಕಲಾಪದ ವೇಳೆ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಅವರು ಗೈರು ಹಾಜರಾಗಿದ್ದಾರೆ. ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಸೂಚನೆ ಮೇರೆಗೆ ವಿಧಾನ ಸಭೆ ಕಾರ್ಯದರ್ಶಿ ಎಸ್. ಮೂರ್ತಿ ಇಬ್ಬರು ಶಾಸಕರ ಹೆಸರನ್ನು ಕೂಗಿದರು. ಆದರೆ ಪ್ರಮಾಣ ವಚನ ಸ್ವೀಕಾರ ವೇಳೆ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಈ ಹಿನ್ನಲೆಯಲ್ಲಿ 112 ಕ್ಕೆ ಇದ್ದ ಮ್ಯಾಜಿಕ್ ಸಂಖ್ಯೆ 110ಕ್ಕೆ ಇಳಿದಿದಂತಾಗಿದೆ.