ಜೆಡಿಎಸ್ ಶಾಸಕರಿಗೆ ನೂರು ಕೋಟಿ ಆಮಿಷ
Date : 2018-05-16 SHARE
ಬೆಂಗಳೂರು : ಬಿಜೆಪಿಯವರು ಕುದುರೆ ವ್ಯಾಪಾರ ಆರಂಭಿಸಿದ್ದು, ಒಬ್ಬ ಜೆಡಿಎಸ್ ಶಾಸಕರಿಗೆ ನೂರು ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿ ಎಸ್ ಶಾಸಕಾಂಗ ಸಭೆಯ ನಾಯಕ ಹೆಚ್. ಡಿ ಕುಮಾರಸ್ವಾಮಿ ಗಂಭೀರವಾದ ಆರೋಪ ಮಾಡಿದರು. ಅವರು ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಬೆಂಬಲ ಕೋಡ್ತಿನಿ ಅಂದ್ರು ನಾವು ಅವರ ಜೊತೆಗೆ ಹೋಗಲ್ಲ. ಇದಕ್ಕೆ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡರ ಸಹಮತವಿಲ್ಲ. ಅಲ್ಲದೆ, ದೇಶದ ಹಲವು ಪಕ್ಷಗಳ ನಾಯಕರು ಸಹ ಕರೆ ಮಾಡಿ ದುಡಕಬೇಡಿ ಎಂದು ಸಲಹೆ ನೀಡಿದ್ದಾರೆ ಎಂದರು. ಬಿಜೆಪಿಯ ಆಸ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಜೆಡಿಎಸ್ ಗೆ ಮಾತ್ರ ಸಾಧ್ಯ ಎಂದ ಅವರು ಬಿಜೆಪಿ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದರು. ಅಮಿತ್ ಶಾ ವಿರುದ್ದ ಗುಡುಗಿದ ಹೆಚ್ ಡಿ ಕೆ ಬಿಜೆಪಿಯ ೧೦-೧೫ ಶಾಸಕರು ನಮ್ಮ ಜೊತೆಗೆ ಸಂಪರ್ಕಕ್ಕೆ ಬಂದಿದ್ದಾರೆ. ನಾವು ನಿಮ್ಮ ಹಾಗೆಯೇ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು. ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ತಿರುಗು ಬಾಣವಾಗಲಿದೆ ಎಂದು ತಿರುಗೇಟು ನೀಡಿದರು.