ದೊಡ್ಡ ಗೌಡರ ಮೇಲೆ ಸೇಡು ತೀರಿಸಿಕೊಳ್ತಾರಾ ರಾಜ್ಯ "ವಾಲಾ" ..?
Date : 2018-05-16 SHARE
ಬೆಂಗಳೂರು : 22 ವರ್ಷಗಳ ಹಿಂದೆ ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದ ವಜುಬಾಯಿ ವಾಲಾ ಅವರು ಅಲ್ಲಿನ ಬಿಜೆಪಿ ಸರಕಾರದಿಂದ ಬಂಡಾಯವೆದ್ದ ಕೆಲವು ಮುಖಂಡರು ಕಾಂಗ್ರೆಸ್ ಜೊತೆ ಸೇರಿ ಸರಕಾರ ಬೀಳಿಸಲು ಯತ್ನಿಸಿದ್ದರು. ಆದರೆ, ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಕ್ಷ ಗೆದ್ದಿತ್ತು. ಇದನ್ನು ವಿರೋಧಿಸಿ ಬಿಜೆಪಿ ಬಂಡಾಯ ಹಾಗೂ ಕಾಂಗ್ರೆಸ್ ಮುಖಂಡರು ವಿಧಾನಸಭೆಯಲ್ಲೇ ದಾಂಧಲೆ ನಡೆಸಿದ್ದರು. ಆಗ ಕಾಂಗ್ರೆಸ್ ಮೂಲದ ಅಲ್ಲಿನ ರಾಜ್ಯಪಾಲರು ಬಹುಮತ ಸಾಬೀತು ಪ್ರಕ್ರಿಯೆ ಅಸಾಂವಿಧಾನಿಕವೆಂದು, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸು ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಗುಜರಾತ್‌ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆದೇಶಿಸಿದ್ದರು. ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ, ದೇವೇಗೌಡರು ಸರಕಾರವನ್ನು ಕಿತ್ತೆಸೆದಿದ್ದರು. ಆಗ ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದ ವಜುಬಾಯಿ ವಾಲಾ ಅವರು ಈಗ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ. ಇದೀಗ ದೇವೇಗೌಡರ ಮೇಲೆ ಅವರು ಹಳೆಯ ಸೇಡು ತೀರಿಸಿಕೊಳ್ಳತ್ತಾರಾಯೇ ಎಂಬುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.