FOR BEST NEWS & ADVERTISEMENT CONTACT PRAJAKIRAN - 9341197609
  • ಬಿಜೆಪಿಗೆ ಸದನದಲ್ಲಿಯೇ ತಿರುಗೇಟು ನೀಡಲು ಮುಂದಾದ ಜೆಡಿಎಸ್, ಕಾಂಗ್ರೆಸ್


    Date : 2018-05-16 SHARE

    ಬೆಂಗಳೂರು : ಬಹುಮತ ಸಾಬೀತು ಪಡಿಸಲು ಮುಂದಾಗಿರುವ ರಾಜ್ಯ ಬಿಜೆಪಿಗೆ ವಿಧಾನ ಸಭೆಯ ಸದನದಲ್ಲಿಯೇ ಉತ್ತರ ನೀಡಲು ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಬಹುಮತ ಸಾಬೀತಿಗೆ ಬೇಕಾಗಿರುವ ಸಭಾಧ್ಯಕ್ಷರ ಹುದ್ದೆ ಚುನಾವಣೆಯಲ್ಲಿಯೇ ಎರಡು ಪಕ್ಷಗಳು ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ತಿರುಮಂತ್ರ ಹಾಕುಲು ಯೋಜನೆ ರೂಪಿಸಿದೆ. ಆ ಮೂಲಕ ಬಿಜೆಪಿಗೆ ಮುಜುಗರ ನೀಡುವ ತಂತ್ರ ಹೆಣೆದಿದೆ. ಅಲ್ಲಿಯವರೆಗೆ ಹಂಗಾಮಿ ಸ್ಪೀಕರ್ ಆಗಿ ಶಾಸಕರಿಗೆ ಯಾರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.