ಮಾಜಿ ಸಚಿವ ಎಚ್.ಕೆ.ಪಾಟೀಲ್ ತಮ್ಮ ಜಾತಿ ಸ್ಪಷ್ಟ ಪಡಿಸಲಿ
Date : 2018-05-22 SHARE
ಹುಬ್ಬಳ್ಳಿ : ಮಾಜಿ ಸಚಿವ ಎಚ್.ಕೆ.ಪಾಟೀಲ್ ತಮ್ಮ ಜಾತಿ ಯಾವುದು ಎಂಬುದು ಸ್ಪಷ್ಟ ಪಡಿಸಬೇಕು. ಅವರು ಈವರೆಗೆ ತಮ್ನ ಜಾತಿಯನ್ನು ಬಹಿರಂಗ ಪಡಿಸಿಲ್ಲ. ಅವರು ಈ ಬಾರಿ ತಿನಕಾಡಿ ಗೆದ್ದಿದ್ದಾರೆ, ಅವರದು ಗೆಲುವು ಅಲ್ಲಾ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಅನೇಕ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನ ಜನರು ತಿರಸ್ಕಾರ ಮಾಡಿದ್ದಾರೆ. ಆದರೆ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲಾ ಅಂತಾರೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಎಂದು ಕಿಡಿಕಾರಿದರು. ಇನ್ನೂ ಡಿ.ಕೆ.ಶಿ ಹೈಕಮಾಂಡ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಒಳ ಕುದಿ ಇದೆ. ಇನ್ನೂ ಕೆಲವು ದಿನಗಳಲ್ಲಿ ಅದು ಹೊರಬರಲಿದೆ ಎಂದರು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ಅದು ಸೋಲು ಕಂಡು ಜೆಡಿಎಸ್ ಮುಂದೆ ಮಂಡಿ ಊರಿದೆ. ಕಾಂಗ್ರೆಸ್ ಹಂತ ಹಂತವಾಗಿ ಅಸ್ತಿತ್ವ ಕಳೆದಕೊಳ್ಳುವದನ್ನು ಬಿಟ್ಟು ಜೆಡಿಎಸ್ ಪಕ್ಷದೊಂದಿಗೆ ವಿಲೀನ ಆಗಬೇಕೆಂದರು. ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಸಿಕ್ಕ ವಿವಿಪ್ಯಾಟ್ ಬಗ್ಗೆ ಕೂಲಂಕುಷವಾಗಿ ವಿಚಾರಣೆ ಆಗಬೇಕು.ವಿವಿಪ್ಯಾಟ್ ಸಿಕ್ಕ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದ್ರು. ಇನ್ನೂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡ್ತೆನೆ ಎಂದಿದ್ದರು.ಈಗ ಬಹುಮತ ಬಂದ್ರೆ ಮಾಡ್ತಾ ಇದ್ದೆ ಎಂದು ಯೂ ಟರ್ನ್ ಹೊಡೆದಿದ್ದಾರೆ.ಈ ಸರ್ಕಾರ ಬಹಳ ದಿನ ಹೋಗುವುದಿಲ್ಲ ನಮ್ಮ ಸರ್ಕಾರ ಬಂದಿದ್ದರೆ ಅವಳಿ ನಗರದ ಮಹಾನಗರ ಪಾಲಿಕೆಗೆ ಬರುವ 130 ಕೋಟಿ ಹಣ ಬಿಡುಗಡೆ ಮಾಡಸ್ತಾ ಇದ್ದಿವಿ, ಈಗಲೂ ನಾವು ಸರ್ಕಾರಕ್ಕೆ ಒತ್ತಡ ಹಾಕುತ್ತೆನೆ.ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರನ್ನ ಪೈವ್‌ಸ್ಟಾರ್ ಜೈಲಿನಲ್ಲಿ ಇಟ್ಟಿದ್ದಾರೆಂದರು. ಇನ್ನೂ ಅಖಂಡ ಧಾರವಾಡ ಜಿಲ್ಲೆಯ 17 ಕ್ಷೇತ್ರಗಳಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು ಇದು ಉತ್ತಮವಾದ ಸಾಧನೆಯಾಗಿದೆ ಎಂದರು.