ರಾಜ್ಯಕ್ಕೂ ಬಾವಲಿ ಜ್ವರದ ಆತಂಕ
Date : 2018-05-22 SHARE
ಮಂಗಳೂರು/ ಮೈಸೂರು : ಈಗಾಗಲೇ ಕೇರಳದಲ್ಲಿ ಭಾರೀ ಆತಂಕ ಸೃಷ್ಟಿಸಿದ ಬಾವಲಿ ಜ್ವರ ರಾಜ್ಯಕ್ಕೂ ಕಾಲಿಡುವ ಆತಂಕ ಈಗಾಗಲೇ ಶುರುವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಹಾಗೂ ಮೈಸೂರು ಭಾಗದಲ್ಲಿ ಆರೋಗ್ಯ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಅಧಿಕಾರಿಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದು, ಜಾಗೂರುಕತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಕೇರಳದಲ್ಲಿ ನಿಫಾ ಹಿನ್ನೆಲೆಯಲ್ಲಿ ಹೆಚ್. ಡಿ ಕೋಟೆ ತಾಲೂಕಿನ ಗಡಿ ಭಾಗದ ಹಳ್ಳಿಯಲ್ಲಿ ಆರೋಗ್ಯಾಧಿಕಾರಿ ಉದಯಕುಮಾರ್ ಅರಿವು ಮೂಡಿಸಿದ್ದಾರೆ.