ಬೆಂಗಳೂರು : ಭಾರತ ಬಂದ್ ಕರೆ ಹಿನ್ನಲೆಯಲ್ಲಿ ರಾಜ್ಯದ ಬಹುತೇಕ ಮಾಲ್, ಮಲ್ಟಿಫ್ಲೆಕ್ಸ್ ಗಳಲ್ಲಿ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ.
ಆದರೆ ಕೆಲವು ಮಾಲೀಕರು ಪರಿಸ್ಥಿತಿಗೆ ಅನುಗುಣವಾಗಿ ನಿಭಾಯಿಸಲು ನಿರ್ಧರಿಸಿದ್ದಾರೆ. ಇನ್ನೂ ಕೆಲವುಗಳ ಪೈಕಿ ಪ್ರಮುಖವಾಗಿ ಓರಿಯನ್, ಮಂತ್ರಿ, ಗರುಡಾ ಮಾಲ್ ಸೇರಿ ಅನೇಕರು ಬಂದ್ ಮಾಡಲು ನಿರ್ಧರಿಸಿದ್ದಾರೆ.
ರಾಜ್ಯಾದ್ಯಂತ ಬಹುತೇಕ ಸರಕಾರಿ ಶಾಲಾ ಕಾಲೇಜುಗಳು ಬಹುತೇಕ ಬಂದ್ ಆಗಲಿದ್ದು, ಬೆಂಗಳೂರು ಜಿಲ್ಲಾಧಿಕಾರಿ ವಿಜಯ ಶಂಕರ್ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕರಿಗೌಡ ಅವರು ಸಂಘಟನೆಗಳಿಗೆ ಬಲವಂತ ಬಂದ್ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.
ಖಾಸಗಿ ಶಾಲಾ ಕಾಲೇಜುಗಳಿಗೆ ಕೂಡ ಈಗಾಗಲೇ ರಜೆ ಘೋಷಿಸಲಾಗಿದೆ. ಅದೇ ರೀತಿ ಹಾವೇರಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ ರಜೆ ಘೋಷಿಸಿದ್ದಾರೆ. ಆದರೆ ಯಥಾ ಪ್ರಕಾರ ಸರಕಾರಿ ಕಚೇರಿ ತೆರೆಯಲಿವೆ ಎಂದು ಹೇಳಿದ್ದಾರೆ.
ತುಮಕೂರು :ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜ್ ಗಳಲ್ಲಿ ಒಂದಾಗಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜ್ ನಲ್ಲಿ 53 ವಿದ್ಯಾರ್ಥಿಗಳಿಗೆ ಸೀಟ್ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಮೇರಿಟ್ ಆಧಾರದ ಮೇಲೆ ಆಯ್ಕೆಯಾದ ವಿದ್ಯಾರ್ಥಿಗಳು ಡಿಡಿ ತೆಗೆದುಕೊಂಡು ತುಮಕೂರಿನ ಹೆಗ್ಗರೆಯಲ್ಲಿರುವ ಸಿದ್ಧಾರ್ಥ ಆಡಳಿತ ಮಂಡಳಿ ಬಳಿ ಹೋದರೆ ಒಳಗೆ ಹೋಗಲು ಸಿಬ್ಬಂದಿ ಬಿಡುತ್ತಿಲ್ಲ. ಸೀಟ್ ಖಾಲಿಯಾಗಿದೆ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ. ಸಿದ್ಧಾರ್ಥ ಆಡಳಿತ ಮಂಡಳಿ ಭೇಟಿ ಮಾಡಬೇಕಾದರೆ ಗೇಟ್ ಪಾಸ್ ನೀಡಲಾಗುತ್ತಿದೆ. ಭದ್ರತೆ ಸಿಬ್ಬಂದಿ ಉಡಾಫೆ ಉತ್ತರ ನೀಡುತ್ತಿದ್ದಾರೆ. […]
ಹಾಸನ : ಮುಂಬರುವ ಲೋಕಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ವಿಚಾರ ಕುರಿತಂತೆ ಲೋಕೋಪಯೋಗಿ ಸಚಿವ ಹಾಗೂ ಪ್ರಜ್ವಲ್ ತಂದೆಯೂ ಆಗಿರುವ ಹೆಚ್.ಡಿ. ರೇವಣ್ಣ ಶನಿವಾರ ಪ್ರತಿಕ್ರಿಯಿಸಿದ್ದಾರೆ. ಸದ್ಯ ಪ್ರಜ್ವಲ್ ಗೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹುದ್ದೆ ಕೊಟ್ಟಿದ್ದಾರೆ. ಆತ ಇನ್ನೂ ಕೆಲಸ ಮಾಡಲಿ ಇವತ್ತೇನು ರಾಜಕಾರಣ ಮುಗಿದು ಹೋಗಲ್ಲ ಎಂದರು. ನಾನು ಶಾಸಕನಾಗಿದ್ದು, 32ನೇ ವರ್ಷಕ್ಕೆ. ಹೀಗಾಗಿ ಆತನಿಗೆ ಇನ್ನೂ ಸಾಕಷ್ಟು ವಯಸ್ಸಿದೆ. ಬಡವರ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ. ಇದೆ ವೇಳೆ […]
ಕೊಡಗು : ಕೊಡಗು ಜಿಲ್ಲೆಯ ಜನರ ಪ್ರಾಣವನ್ನು ಉಳಿಸಲು ಹೋಗಿದ್ದ ಸೇನಾ ತಂಡವೊಂದು ಇದೀಗ ಪೊಲೀಸರೊಂದಿಗೆ ಸಂಪರ್ಕ ಕಳೆದುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇಕ್ಲೋಡಿನಿಂದ ಸಂಪರ್ಕ ಕಳೆದುಕೊಂಡ ಸೇನಾ ತಂಡ ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಅಲ್ಲಿ ಗುಡ್ಡ ಕುಸಿತದಿಂದಾಗಿ ಹಲವಾರು ಜನರು ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ನೆರವಿಗೆ ತೆರಳಿದ್ದ ಸೇನಾ ತಂಡವು ಇದೀಗ ಸಂಕಷ್ಟಕ್ಕೆ ಸಿಲುಕಿರುವುದು ಜಿಲ್ಲಾಡಳಿತಕ್ಕೆ ತೆಲೆ ನೋವಾಗಿ ಪರಿಣಮಿಸಿದೆ. ಇನ್ನೂ ಇದೇ ವೇಳೆ ಮುಕ್ಕೋಡ್ಲುವಿನಲ್ಲಿ ಸಿಲುಕಿರುವ 60 ಜನರ ರಕ್ಷಣಾ […]