ರಾಜ್ಯ

ರೌಡಿ ಶೀಟರ್ ಗಳಿಗೆ ಶಾಕ್ ನೀಡಿದ ಖಾಕಿ ಪಡೆ

ಹುಬ್ಬಳ್ಳಿ : ಅವಳಿ ನಗರದ ರೌಡಿ ಶೀಟರ್ ಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.

ರೌಡಿಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ, ಅವರ ನಿದ್ದೆಗೆಡಿಸಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖಾಕಿ ಪಡೆಯ ಖದರ್ ತೋರಿಸಿದೆ.

ನಗರದ ಪ್ರಮುಖ ರೌಡಿಗಳ ಮನೆಗಳ ಮೇಲೆ ಈ ದಾಳಿ ನಡೆದಿದ್ದು, ಅವರ ಮನೆಯಲ್ಲಿನ ಅಪಾರ ಪ್ರಮಾಣ ಮಾರಾಕಾಸ್ತ್ರಗಳ ವಶಪಡಿಸಿಕೊಳ್ಳಲಾಗಿದೆ.

ಡಿಸಿಪಿ ಬಿ.ಎಸ್‌. ನೇಮಗೌಡ, ದಕ್ಷಿಣ ವಲಯ ಎಸಿಪಿ ಶಿವಪುತ್ರ ಸಕ್ರಿ ಸೇರಿದಂತೆ ನಾಲ್ಕು ಪ್ರತ್ಯೇಕ ತಂಡಗಳಿಂದ ಈ ದಾಳಿ ನಡೆದಿದೆ.

ರೌಡಿ ಶೀಟರ್ ಗಳು ತಮ್ಮಮನೆಗಳಲ್ಲಿ ಇಟ್ಟುಕೊಂಡಿದ್ದ ಮಚ್ಚು ಲಾಂಗು ವಶ ಪಡಿಸಿಕೊಳ್ಳಲಾಗಿದ್ದು, ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಇದಲ್ಲದೆ ಹಲವರ ವಿರುದ್ಧ ಅಕ್ರಮ ಮಾರಕಾಸ್ತ್ರ ಸಂಗ್ರಹದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಸಮರ ಸಾರಲಾಗಿದೆ.

Please follow and like us:

Leave a Reply

Your email address will not be published. Required fields are marked *