ಬೆಳಗಾವಿ prajakiran.com : ಸಾಮೂಹಿಕ ಪ್ರಾರ್ಥನೆ ಮಾಡಿದ್ದ ಐವರಿಗೆ ಸೋಂಕು ತಗುಲಿದ ಘಟನೆ ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಒಟ್ಟಿಗೆ ಪ್ರಾರ್ಥನೆ ಮಾಡಿದ ಪಿ 245 ಸೋಂಕಿತನ ಜೊತೆಗೆ ಪ್ರಾರ್ಥನೆ ಸಲ್ಲಿಸಿದ್ದ ಪಿ- 301 ಕರೋನಾ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಇದೀಗ ಪಿ-301 ನೊಂದಿಗೆ ಪ್ರಾರ್ಥನೆ ಮಾಡಿದ್ದರಿಂದ ಪಿ 574ನೇ ವ್ಯಕ್ತಿ ಕೂಡ ಸೋಂಕಿತನಾಗಿದ್ದಾನೆ.
ಅಲ್ಲದೆ, ಪ್ರಾರ್ಥನೆ ಮಾಡಿದ್ದ ಆತನಿಂದಾಗಿ ಪಿ 574 ಸೋಂಕಿತನ ತಮ್ಮ ಹಾಗೂ ಮಗಳಿಗೆ ಸೋಂಕು ಬಂದಿದೆ.
ಇದರಿಂದಾಗಿ ಬೆಳಗಾವಿ ಜಿಲ್ಲಾಡಳಿತ ಬೆಚ್ಚಿ ಬಿದ್ದಿದ್ದು, ಒಟ್ಟಿಗೆ ಪ್ರಾರ್ಥನೆ ಮಾಡಿದ್ದವರ ಹುಡುಕಾಟ ಶುರು ಮಾಡಿದೆ.
ಬೆಳಗಾವಿ ಜನತೆ ಮೊದಲೇ ಬೆಚ್ಚಿ ಬಿದ್ದಿದ್ದು, ಲಾಕ್ ಡೌನ್ ನಡುವೆ ಸಾಮೂಹಿಕ ಪ್ರಾರ್ಥನೆ ಮಾಡುವಅಗತ್ಯವಿತ್ತೆ ಎಂದು ಮಾತನಾಡಿಕೊಳ್ಳುವಂತಾಗಿದೆ.
ಇದೀಗ ಆತಂಕದಲ್ಲಿಯೇ ಅಧಿಕಾರಿಗಳು ಅವರ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಕೋಲಾರ ನಲ್ಲಿ ರಂಜಾನ್ ನಿಮಿತ್ತ ಮಸೀದಿ ಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದ ಮಸೀದಿ ಒಳಗೆ ಪ್ರವೇಶಿಸಿ ಮಹಿಳಾ ತಹಸೀಲ್ದಾರ್ ವಾರ್ನಿಂಗ್ ನೀಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ನಮಾಜ್ ಮಾಡುತ್ತಿದ್ದ 11 ಜನರನ್ನು ವಶಕ್ಕೆ ಪಡೆದು ಆನಂತರ ಬಿಟ್ಟುಕಳುಹಿಸಲಾಗಿದೆ.