545 ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದಿಂದ ನೋಂದ 54 ಸಾವಿರ ಅಭ್ಯರ್ಥಿಗಳು
ಧಾರವಾಡ ಪ್ರಜಾಕಿರಣ. ಕಾಮ್ :
545 ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಲು ಶೀಘ್ರದಲ್ಲೇ ದಿನಾಂಕ ಪ್ರಕಟಿಸುವಂತೆ ಒತ್ತಾಯಿಸಿ ರವಿಶಂಕರ್ ಮಾಲಿಪಾಟೀಲ್ ಹಾಗೂ ಗೆಳೆಯರ ಬಳಗ ಟ್ವಿಟರ್ ಅಭಿಯಾನ ಆರಂಭಿಸಿದೆ.ಆ ಮೂಲಕ ರಾಜ್ಯದ 54 ಸಾವಿರ ನೋಂದ ಅಭ್ಯರ್ಥಿಗಳ ಜೊತೆಗೆ ನಿಲ್ಲಲು ರಾಜ್ಯದ ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಆಗ್ರಹಿಸಿದೆ.
ಅಲ್ಲದೆ, ಅಡ್ವೋಕೋಟ್ ಜನರಲ್ ಅವರ ಮೂಲಕ ರಾಜ್ಯ ಹೈಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸುವ ಮೂಲಕ ತನ್ನ ಪಾಲಿನ ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ ಎಂದು ಸಲಹೆ ನೀಡಿದೆ.54 ಸಾವಿರ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ನೆನಪಿಸಿದೆ.
ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಡಿಜಿಪಿ ಸೇರಿದಂತೆ ಅನೇಕರನ್ನು ಟ್ಯಾಗ್ ಮಾಡಿದೆ.
ಈವರೆಗೆ 550 ಟ್ವೀಟ್, 475 ರೀಟ್ವೀಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿದೆ.
ಇದೇ ವೇಳೆ ರಾಜ್ಯ ಹೈಕೋರ್ಟ್ ನಲ್ಲಿ ಇಂದು ನಡೆಯಬೇಕಿದ್ದ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಇದೀಗ ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ.



