ಮಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ನರೇಂದ್ರ ಮೋದಿ ಇಬ್ಬರು ಒಂದೇ ತಾಯಿಯ ಮಕ್ಕಳು. ಎರಡು ಜನ ಒಂದೆ, ಅವರಿಗೆ ಅಲ್ಲಿ ಗೆಲ್ಲಬೇಕು ಅದಕ್ಕೆ ಅವರು ಭಾರತಕ್ಕೆ ಬೈಯ್ತಾರೆ. ಇವರು ಇಲ್ಲಿ ಗೆಲ್ಲಬೇಕು ಅದಕ್ಕೆ ಪಾಕಿಸ್ತಾನವನ್ನು ಬೈಯ್ತಾರೆ ಎಂದು ಟೀಕಿಸಿದ್ದಾರೆ.
ಇದರಿಂದಾಗಿ ರಮಾನಾಥ ರೈ ಹೇಳಿಕೆ ಇದೀಗ ವಿವಾದಕ್ಕೆ ತಿರುಗಿದ್ದು, ಚುನಾವಣೆ ಸಂದರ್ಭದಲ್ಲಿ ಈ ತರಹದ ಟೀಕಿಎ ಬಿಟ್ಟು ಬೈಯಲು ಇವರಿಗೆ ಇದೇ ಬೇಕಿತ್ತಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಹಿರಿಯ ಮುಖಂಡರಾಗಿದ್ದುಕೊಂಡು ಈ ರೀತಿಯ ಅಚ್ಚರಿ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಅನೇಕರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಭಾರತದ ಸಾಂಪ್ರದಾಯಿಕ ಎದುರಾಳಿಯಾಗಿದೆ. ಭಾರತವು ಪಾಕಿಸ್ತಾನವನ್ನು ವೈರಿರಾಷ್ಟ್ರ ಎಂದೆ ಪರಿಗಣಿಸದಿದ್ದರೂ, ಅದು ಮಾಡುವ ಕುಕೃತ್ಯ, ಗಡಿಯಲ್ಲಿನ ಕಿತಾಪತಿ, ಉಗ್ರರ ದಾಳಿ, ಕಾಶ್ಮೀರದ ಗಡಿಯಂಚಿನಲ್ಲಿ ಯುದ್ದಕ್ಕೆ ಸಜ್ಜಾಗಿರುವ ರೀತಿ ವರ್ತಿಸುವ ಬೆನ್ನ ಹಿಂದೆಯೇ ಕಾಂಗ್ರೆಸ್ ಮುಖಂಡರು ಇಂತಹ ಹೇಳಿಕೆ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗುಡುಗುವ ಭರದಲ್ಲಿ ಈ ರೀತಿಯ ಹೇಳಿಕೆ ನೀಡವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಎದುರಾಗಿದೆ.