ಧಾರವಾಡ : ಇಲ್ಲಿಯ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ರಕ್ಷಾ ಬಂಧನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳು ಮರಗಳಿಗೆ ರಕ್ಷಾಬಂಧನ ಕಟ್ಟುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದರು. ನಂತರ ವಿದ್ಯಾರ್ಥಿಗಳಿಗೆ ಮರಗಳ ರಕ್ಷಣೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು.
ನೇಚರ್ ಫಸ್ಟ್ ಇಕೋ ವಿಲೇಜ ಸಂಸ್ಥಾಪಕ ಪಿ.ವಿ. ಹಿರೇಮಠ ಮಾತನಾಡಿ, ಒಂದು ಮರ ತನ್ನ ಜೀವಿತಾವಧಿಯಲ್ಲಿ 36 ಲಕ್ಷ ರೂಪಾಯಿಯಷ್ಟು ಆರ್ಥಿಕ ಮತ್ತು ಆರೋಗ್ಯದಾಯಕ ಕೊಡುಗೆ ಕೊಡುತ್ತದೆ. ಆದರೆ, ಮಾನವ ತನ್ನ ಕ್ಷಣಿಕ ಆಸೆಗಾಗಿ ಅಮೂಲ್ಯ ಕೊಡುಗೆಯನ್ನು ನೀಡುತ್ತಿರುವ ಮರಗಳನ್ನು ಕಡಿಯುತ್ತಿದ್ದಾನೆ. ಹೀಗಾಗಿ, ರಕ್ಷಾಬಂಧನದಂತಹ ಹಬ್ಬವನ್ನು ಮರಗಳಿಗೆ ರಕ್ಷೆಯ ಬಂಧನವನ್ನು ಕಟ್ಟುವ ಮೂಲಕ ಮರಗಳ ರಕ್ಷಣೆಗೆ ಯುವ ಜನತೆ ಮುಂದಾಗಬೇಕೆಂದು ಕರೆನೀಡಿದರು.
ಕರ್ನಾಟಕ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಜಿ. ಪಾಟೀಲ, ನೇಚರ್ ಫಸ್ಟ್ ಇಕೋ ವಿಲೇಜಿನ ಸಹ ಸಂಸ್ಥಾಪಕ ಚಂದ್ರಶೇಖರ ಭೈರಪ್ಪನವರ, ಪ್ರಧಾನ ಸೇವಕ ಪ್ರಕಾಶ ಗೌಡರ, ಕರ್ನಾಟಕ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹ ಉಪನ್ಯಾಸಕಿ ಡಾ. ವೀಣಾ ರೋಕಡೆ ಇದಕ್ಕೆ ಸಾಕ್ಷಿಯಾದರು.
ಬೆಂಗಳೂರು : ಸರಕಾರ ಸುಭದ್ರವಾಗಿದೆ. ಆದರೆ ಕೆಲವರು ಈ ರೀತಿ ಹೇಳಿಕೆ ಕೊಡುತ್ತಾರೆ. ಏನೂ ಮಾಡಕ್ಕ ಆಗಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ತಿಳಿಸಿದರು. ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮ್ಮೀಶ್ರ ಸರಕಾರ ಐದು ವರ್ಷ ಕಂಪ್ಲೀಟ್ ಮಾಡ್ತಿವಿ ಎಂದರು. ರಾಜಕೀಯದಲ್ಲಿ ಒಂದಿಷ್ಟು ಬೆಳವಣಿಗೆ ಆಗ್ತಾ ಇರುತ್ತವೆ. ಅವು ಸ್ವಾಭಾವಿಕ ಬೆಳವಣಿಗೆ. ಪಕ್ಷ ಎಲ್ಲವನ್ನು ಸರಿಪಡಿಸುತ್ತದೆ ಎಂದ ಅವರು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಡೆಡ್ ಲೈನ್ ಯಾವುದೇ ಕೆಲಸ ಮಾಡಲ್ಲ […]
ಶ್ರೀರಂಗಪಟ್ಟಣ : ವರಮಹಾಲಕ್ಷ್ಮಿ ಹಬ್ಬದ ನಿಮಿತ್ಯ ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿನ ಶ್ರೀ ಚಾಮುಂಡೇಶ್ವರಿ ತಾಯಿಗೆ ನೋಟುಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಅರ್ಚಕ ಲಕ್ಷ್ಮೀಶ್ ಅವರು ಭಕ್ತರು ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಯನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು. 2000, 500, 200, 100, 50, 20, 10 ಹಾಗೂ 5 ರೂ ನೋಟುಗಳ ಸಿಂಗಾರ ಭಕ್ತರ ಮನ ಪುಳಕಗೊಳ್ಳುವಂತೆ ಮಾಡಿತು. ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ […]
ಹಾಸನ : ಜೆಡಿಎಸ್ ಪಕ್ಷದ ವಿರುದ್ದ ಟೀಕೆ ಮಾಡುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ನಾಲ್ಕು ವರ್ಷಗಳಿಂದ ಕೇಂದ್ರ ಸರಕಾರದಿಂದ ಯಾಕೆ ಅನುದಾನ ತರಲಿಲ್ಲ ಎಂದು ಪ್ರಶ್ನಿಸಿದ್ದಾರೆ. ನಾನು ಎರಡು ತಿಂಗಳಿಂದ ಅವರ ಹೇಳಿಕೆಗಳನ್ನು ನೋಡ್ತಾ ಇದ್ದೀನಿ. ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಹೇಳಿರುವುದಕ್ಕೆ ವರ್ಗಾವಣೆ ದಾಖಲೆಗಳಿದ್ದರೆ […]