ರಾಜ್ಯ

ರೇವಣ್ಣಗೆ ದಡ್ಡ ನನ್ಮಗ ಅಂದಿದಕ್ಕೆ ಅಮಾನತು !

ಹಾಸನ : ರಾಜ್ಯದ ಸಮ್ಮೀಶ್ರ ಸರಕಾರದ ಪ್ರಭಾವಿ ಸಚಿವ ಹಾಗೂ ಸಿಎಂ ಕುಮಾರಸ್ವಾಮಿ ಅವರ ಸಹೋದರ ಆಗಿರುವ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ದಡ್ಡ ನನ್ಮಗ ಅಂದಿದಕ್ಕೆ ಶಿಕ್ಷಕರೊಬ್ಬರು ಸೇವೆಯಿಂದ ಅಮಾನತುಗೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚನ್ನಪುರ ಶಾಲೆ ಶಿಕ್ಷಕ ವರದರಾಜು ಅವರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಸಹಶಿಕ್ಷಕರೊಂದಿಗೆ ಮಾತನಾಡುವ ವೇಳೆ ರೇವಣ್ಣ ಅವರ ವಿಷಯ ಪ್ರಸ್ತಾಪವಾಗಿತ್ತು.

ಆಗ ವರದರಾಜ್ ಅವರು ರೇವಣ್ಣ ಅವರಿಗೆ ಅವನು ದಡ್ಡ ನನ್ಮಗ ಬಿಡಿ ಎಂದು ಹೇಳಿದ್ದರು. ಆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.

ವರದರಾಜ್ ಅಮಾನತುಗೊಂಡಿರುವುದು ಹಾಸನ ಜಿಲ್ಲೆಯಲ್ಲಿ ಶಿಕ್ಷಕರ ಪಾಳೇಯದಲ್ಲಿ ಭಾರೀ ನಡುಕ ಉಂಟು ಮಾಡಿದ್ದು, ಮಾಡಿದ ತಪ್ಪಿಗೆ ಸರಿಯಾದ ಶಾಸ್ತಿಯಾಗಿದೆ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಇದನ್ನೂ ತೀವ್ರವಾಗಿ ವಿರೋಧಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *