ಸಿನಿಮಾ

ಅರ್ಜುನ ಸರ್ಜಾ ವಿರುದ್ದ ಶೃತಿ ಹರಿಹರನ್ ಬಾಂಬ್

ಬೆಂಗಳೂರು : ವಿಸ್ಮಯ ಚಿತ್ರದಲ್ಲಿ ಹಿರಿಯ ನಾಯಕ ನಟ ಅರ್ಜುನ ಸರ್ಜಾ ನನ್ನೊಂದಿಗೆ ಬಲವಂತವಾಗಿ ತಬ್ಬಿಕೊಂಡಿದ್ದರು. ಅದು ತುಂಬಾ ಅಸಹಜವಾಗಿತ್ತು ಎಂದು ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಬಾಂಬ್ ಸಿಡಿಸಿದ್ದಾರೆ.

ಅವರು ಮ್ಯಾಗಜಿನ್ ವೊಂದಕ್ಕೆ ಈ ಕುರಿತು ನೀಡಿದ ವಿಶೇಷ ಸಂದರ್ಶನದಲ್ಲಿ ಇಂತಹ ಹೇಳಿಕೆ ನೀಡಿದ್ದು, ಇದರಿಂದ ಇಡೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದ ಚಲನಚಿತ್ರ ರಂಗ ತಲ್ಲಣಗೊಂಡಿದೆ.

ಅವರು ನನ್ನೊಂದಿಗೆ ನಡೆದುಕೊಂಡ ರೀತಿ ಸರಿಯಿರಲಿಲ್ಲ. ಈ ಬಗ್ಗೆ ನಾನು ಕೂಡಲೇ ನಿರ್ದೇಶಕರ ಗಮನಕ್ಕೆ ತಂದಿದ್ದೆ. ಆದರೆ ಅವರು ನನಗೆ ಸ್ಪಂದಿಸಲಿಲ್ಲ ಎಂದು ಹೇಳುವ ಮೂಲಕ ಮೀ ಟೂ ಅಭಿಯಾನಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಮೀ ಟೂ ಅಭಿಯಾನ ಹಿಂದಿ ಚಿತ್ರರಂಗ, ಪತ್ರಿಕಾ ರಂಗ, ಕ್ರೀಡಾರಂಗ ಸೇರಿದಂತೆ ಎಲ್ಲಡೆ ಸದ್ದು ಮಾಡಿರುವುದು ಇಲ್ಲಿ ಸ್ಮರಿಸಬಹುದು.

Please follow and like us:

Leave a Reply

Your email address will not be published. Required fields are marked *