ಹುಬ್ಬಳ್ಳಿ ಧಾರವಾಡ prajakiran.com : ಇತ್ತೀಚಿಗೆ ಭಾರತದಲ್ಲಿ 5G ಸೇವೆ ಆರಂಭಗೊಂಡಿದ್ದು, ಯಾರಾದರು ನಾವು ಏರ್ಟೆಲ್ ಅಥವಾ ಜಿಯೋ ಹಾಗೂ ಇತರೆ ಕಂಪನಿಯವರು ಅಂತಾ ಹೇಳಿ ಕರೆ ಮಾಡಿದರೆ ಯಾಮಾರಬೇಡಿ ಎಂದು ಹುಬ್ಬಳ್ಳಿ ಧಾರವಾಡ ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.
ನಿಮ್ಮ ಸಿಮ್ ಅನ್ನೂ 4G ಇಂದ 5G ಗೆ ಅಪ್ಡೇಟ್ ಮಾಡುತ್ತಿವೆ ಎಂದು ನಂಬಿಸಿ OTP ಅಥವಾ ಲಿಂಕ್ ಕಳಿಸಿದರೆ ನಿಮ್ಮ ಖಾತೆಯಲ್ಲಿರುವ ಹಣವನ್ನೂ ದೋಚುವ ಸಾದ್ಯತೆ ಇರುವದರಿಂದ , ಯಾವುದೇ ಕಾರಣಕ್ಕೂ OTP ಹಾಗೂ ಲಿಂಕಗಳನ್ನು ಒತ್ತು ಬಾರದು ಅಂತಾ ಸೈಬರ್ ಕ್ರೈಂ ಪೊಲೀಸರು ವಿನಂತಿಸಿದ್ದಾರೆ.
