ಅಂತಾರಾಷ್ಟ್ರೀಯ

ಬಿಜೆಪಿ ಕಾರ್ಯಕರ್ತನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಸ್ಮೃತಿ ಇರಾನಿ

ಅಮೇಠಿ(ಉತ್ತರಪ್ರದೇಶ) : ಅಮೇಠಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಇರಾನಿ ಅವರ ವಿಜಯೋತ್ಸವದ ನಂತರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ಅಂತಿಮ ಯಾತ್ರೆಯಲ್ಲಿ ಸ್ಮೃತಿ ಇರಾನಿ ಹೆಗಲು ಕೊಟ್ಟು ಕುಟುಂಬದವರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಹಲವು ಕಿ.ಮೀ ದೂರ ಸುರೇಂದ್ರ ಸಿಂಗ್ ಪ್ರಾರ್ಥೀವ ಶರೀರವನ್ನು ಹೊತ್ತು ಸಾಗಿದ ಸೃತಿ ಇರಾನಿ ಹೆಗಲು ಕೊಟ್ಟಿರುವುದು ಬಿಜೆಪಿ ಕಾರ್ಯಕರ್ತರಿಗೆ ಸ್ವಲ್ಪ ಮಟ್ಟಿಗೆ ಧೈರ್ಯ ತಂದಿದೆ.

ಸುರೇಂದ್ರ ಸಿಂಗ್ ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಿಜೆಪಿ ಕಾರ್ಯಕರ್ತನ ಕಗ್ಗೋಲೆಯಿಂದ ಅಮೇಠಿ ಬೆಚ್ಚಿಬಿದ್ದಿತ್ತು. ಇದು ರಾಜಕೀಯ ವೈಷಮ್ಯಕ್ಕೆ ನಡೆದ ಕೊಲೆ ಎಂದು ಬಿಂಬಿಸಲಾಗಿದೆ. ಸ್ಮೃತಿ ಇರಾನಿ ಪರ ಸುರೇಂದ್ರ ಸಿಂಗ್ ಹಗಲು ರಾತ್ರಿ ಎನ್ನದೆ ಕಳೆದ ನಾಲ್ಕು ತಿಂಗಳಿಂದ ಕೆಲಸ ಮಾಡಿದ್ದರು.

ಅಲ್ಲದೆ, ಅಮೇಠಿಗೆ ಬಂದಾಗಲೆಲ್ಲಾ ಈ ಸುರೇಂದ್ರ ಸಿಂಗ್ ಸ್ಮೃತಿ ಇರಾನಿ ಅವರ ಹಿಂದೆ ಮುಂದೆ ಓಡಾಡಿಕೊಂಡಿದ್ದ. ರಾಹುಲ್ ಗಾಂಧಿ ವಿರುದ್ದ 1 ಲಕ್ಷ ಮತಗಳ ಅಂತರದಿಂದ ಸ್ಮೃತಿ ಇರಾನಿ ಗೆಲ್ಲುವ‍ಲ್ಲಿ ಸುರೇಂದ್ರ ಸಿಂಗ್ ನಂತಹ ನೂರಾರು ಕಾರ್ಯಕರ್ತರ ಪರಿಶ್ರಮ, ತಪಸ್ಸು ಕೆಲಸ ಮಾಡಿತ್ತು. ಹೀಗಾಗಿ ಕಾಂಗ್ರೆಸ್ ಕೋಟೆ ಭೇದಿಸಲು ಬಿಜೆಪಿಗೆ ಸುಲಭವಾಗಿತ್ತು.

ಹೀಗಾಗಿ ಸ್ಮೃತಿ ಇರಾನಿ ಅವರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ಬಿಜೆಪಿ ಕಾರ್ಯಕರ್ತರಿಗೆ ನೈತಿಕ ಬಲ ತುಂಬಿದ್ದಾರೆ. ಅವರು ಹೆಗಲು ಕೊಟ್ಟು ಹೆಜ್ಜೆ ಹಾಕಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕೊಲೆ ರಾಜಕೀಯ ವೈಷಮ್ಯಕ್ಕೆ ಅಥವಾ ಇಲ್ಲವೇ ಎಂಬುದು ಅಮೇಠಿಯ ಜಾಮಾ ನಗರ ಪೊಲೀಸರ ತನಿಖೆ ನಂತರವೇ ಬಯಲಿಗೆ ಬರಲಿದೆ.

Please follow and like us:

Leave a Reply

Your email address will not be published. Required fields are marked *