ರಾಜ್ಯ

ಎಸ್ ಎಸ್ ಎಲ್ ಸಿ ಪರೀಕ್ಷೆ : ಗ್ರಾಮೀಣ, ವಿದ್ಯಾರ್ಥಿನಿಯರೇ ಮೇಲುಗೈ

 5,82,316 ವಿದ್ಯಾರ್ಥಿಗಳು ಪಾಸ್

2, 28734 ವಿದ್ಯಾರ್ಥಿಗಳು ಫೇಲ್

ಬೆಂಗಳೂರು prajakiran.com : ಕರೋನಾ ಸವಾಲಿನ ಮಧ್ಯೆ ಸಮರ್ಥವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ ಅದರಲ್ಲಿ 5,82,316 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 2, 28734 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ವಿವರಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅಂಕಿಅಂಶಗಳ ಕುರಿತು ವಿವರ ನೀಡಿದರು.

ಒಟ್ಟು ಪರೀಕ್ಷೆಗೆ 8,11,050 ಹಾಜರಾದವರು. ಶಾಲಾ ಮಟ್ಟದಲ್ಲಿಯೇ ಹಾಜರಾತಿ ಕೊರತೆಯಿಂದ 19086 ಜನ ಪರೀಕ್ಷೆ ಯಿಂದ ಹೊರಗುಳಿದಿದ್ದರು. ಕರೋನಾ ಆತಂಕದಿಂದ 18067 ಬರೆದಿರಲಿಲ್ಲ ಎಂದರು.

ಅದೇ ರೀತಿ  ಮೌಲ್ಯಮಾಪನ ಕೂಡ ಸವಾಲಾಗಿತ್ತು. ಆದರೂ ಕೂಡ ಜಿಲ್ಲಾಮಟ್ಟದಲ್ಲಿ ವಿಸ್ತರಣೆ ಮಾಡಿ 34 ಶೈಕ್ಷಣಿಕ ಜಿಲ್ಲೆಗಳ 227 ಕೇಂದ್ರಗಳಿಗೆ ವಿಸ್ತರಿಸಲಾಗಿತ್ತು. ಇದಕ್ಕೆ 52, 219 ಜನ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು.  

ಒಟ್ಟು ಫಲಿತಾಂಶ 71.80 ಬಂದಿದೆ. ಹೋದ ವರ್ಷ 73.70 ಆಗಿತ್ತು. ಸರಕಾರಿ ಶಾಲೆಗಳ ಫಲಿತಾಂಶ 72.79 ಪ್ರತಿಶತ ಆಗಿದೆ. ಇನ್ನುಳಿದಂತೆ ಅನುದಾನಿತ 70.60, ಅನುದಾನ ರಹಿತ 82.3 ಆಗಿದೆ. ಗಂಡು ಮಕ್ಕಳು 66.41 ಹೆಣ್ಣಮಕ್ಕಳು 77.74 ಪ್ರತಿಶತ ಪಾಸ್ ಆಗಿದ್ದಾರೆ.

 ಈ ಬಾರಿ 625ಕ್ಕೆ 625 ಗಳಿಸಿದವರು 6 ಜನ ವಿದ್ಯಾರ್ಥಿಗಳು ಕಳೆದ ಬಾರಿ 2 ಇಬ್ಬರು ಇದ್ದರು. 624 ತೆಗೆದುಕೊಂಡವರು 11 ಜನ ಕಳೆದ ಬಾರಿ 11 ಇತ್ತೇ, 623 ತೆಗೆದುಕೊಂಢವರು 43 ಜನ ಕಳೇದ ಬಾರಿ 19 ಇತ್ತು. 622 39 ಇತ್ತು 621 43 ಇತ್ತು 620 117 ಜನ

ಗ್ರಾಮೀಣ 77.18, ನಗರ 73.41, ಕನ್ನಡ ಮಾಧ್ಯಮ 70.49 ಇಂಗ್ಲಿಷ್ ಮಾಧ್ಯಮ 84.98  ಪಾಸ್ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಬಂದರೆ ಯಾದಗಿರಿ ಕೊನೆ ಸ್ಥಾನ ಪಡೆದಿದೆ.

ಶಿರಸಿಯ ಸನ್ನಿಧಿ ಮಹಾಬಲೇಶ್ವರ ಹೆಗಡೆ, ಬೆಂಗಳೂರು ಚಿರಾಯು, ಮಂಡ್ಯದ ಧೀರಜ್ ರಡ್ಡಿ, ದಕ್ಷಿಣ ಕನ್ನಡದ ಅನುಷಾ, ಚಿಕ್ಕಮಗಳೂರಿನ ತನ್ಮಯಿ ಸಿದ್ದಾಪುರದ ಬೆಂಗಳೂರಿನ ಅಮೋಘ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು.     

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *