ಆರೋಗ್ಯ

ಅಲರ್ಜಿ, ಅಸ್ತಮಾಗಳ ವಿರುದ್ದ ಸೆಣಸಾಡಲು ಸ್ಟ್ರಾಬೆರಿ ತಿನ್ನಿರಿ

  • ಸ್ಟ್ರಾಬೆರಿ ಸೇವನೆಯಿಂದ ಅನ್ನನಾಳ, ಶ್ವಾಸಕೋಶ, ಮೂತ್ರಕೋಶ ಮತ್ತು ಚರ್ಮದ ಕ್ಯಾನ್ಸರ್ ತಡೆಯುವಲ್ಲಿ ಸಹಾಯ ಮಾಡುತ್ತದೆ. ಹಾಗೂ ಕ್ಯಾನ್ಸರ್ ಕಾರಕ ಜೀವಕೋಶಗಳ ಹುಟ್ಟುವಿಕೆಯನ್ನು ನಿಧಾನಗೊಳಿಸುತ್ತದೆ.
  • ಹೃದಯವನ್ನು ಕಾಪಾಡುತ್ತದೆ. ರಕ್ತ ಪರಿಚಲನಾ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
  • ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ನೆರವಾಗುತ್ತದೆ.
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಲು ಸಹಕಾರಿಯಾಗಿದೆ. ಇದು ಸೊಂಕುಗಳ ವಿರುದ್ದ ಹೋರಾಡಲು ನಿಮ್ಮ ದೇಹವನ್ನು ಸಮರ್ಥವಾಗುವಂತೆ ಮಾಡುತ್ತದೆ.
  • ಸ್ಟ್ರಾಬೆರಿ ಅಲರ್ಜಿ ಮತ್ತು ಅಸ್ತಮಾಗಳ ವಿರುದ್ದ ಸೆಣಸಾಡಲು ಬಹಳ ಸಹಕಾರಿ.
  • ಸ್ಟ್ರಾಬೆರಿ ಕಣ್ಣಿನಲ್ಲಿ ಪೊರೆಯು ಆಗದಂತೆ ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ.
  • ಸ್ಟ್ರಾಬೆರಿ ಸೇವನೆಯಿಂದ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
  • ಸ್ಟ್ರಾಬೆರಿ ಸೇವನೆಯಿಂದ ಊರಿಯುತ ಸಮಸ್ಯೆಯನ್ನು ನಿಯಂತ್ರಿಸಬಹುದು.
  • ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಮೆದುಳಿನ ಜೀವಕೋಶಗಳಿಗೆ ಹಾನಿಯಾಗುವುದನ್ನು ಇದು ತಡೆಯುತ್ತದೆ. ಹಾಗೂ ಮೆದುಳಿನ ಆರೋಗ್ಯ ಹೆಚ್ಚು ಮಾಡುವಲ್ಲಿ ಸಹಕರಿಸುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *