ನವದೆಹಲಿ prajakiran.com : ದೇಶದ್ಯಾಂತ ಲಾಕ್ ಡೌನ್ ಸಡಲಿಕೆ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ಸಮ್ಮತಿ ನೀಡಿದೆ.
ಈ ಹಿನ್ನಲೆಯಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು, ಸಾಮಾಜಿಕಅಂತರ ಕಾಯ್ದುಕೊಳ್ಳದೆ ಜನ ಮದ್ಯ ಖರೀದಿಗೆ ಮುಗಿ ಬಿದ್ದಿದ್ದಾರೆ. ಜೊತೆಗೆ ಜನಸಂದಣಿಯೂ ಹೆಚ್ಚಾಗಿದೆ.
ಈ ಬಗ್ಗೆ ಸುಪ್ರೀಂಕೋರ್ಟ್ ಕದ ತಟ್ಟಿದಕೆಲವರು ದೇಶದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದರು.
ಶುಕ್ರವಾರ ಈ ಕುರಿತು ವಿಚಾರಣೆಗೆ ಅರ್ಜಿ ಎತ್ತಿಕೊಂಡ ಸುಪ್ರೀಂಕೋರ್ಟ್ ಮದ್ಯ ಮಾರಾಟಕ್ಕೆ ತಡೆ ನೀಡಲು ನಿರಾಕರಿಸಿದೆ.
ಅಲ್ಲದೆ, ಆನ್ ಲೈನ ನಲ್ಲಿ ಮದ್ಯ ಮಾರಾಟ ಮಾಡಲು ಆಯಾ ರಾಜ್ಯ ಸರಕಾರಗಳು ಗಂಭೀರವಾಗಿ ಚಿಂತಿಸಬಹುದು. ಇದರಿಂದ ಜನಸಂದಣಿ ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಜನರು ಸಾಮಾಜಿಕಅಂತರವನ್ನು ಉಲ್ಲಂಘಿಸಬಾರದು. ಜನಸಂದಣಿ ನಿಯಂತ್ರಣಕ್ಕೆ ಆಯಾ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಸುಪ್ರೀಂಕೋರ್ಟ್ನ ಈ ಆದೇಶದಿಂದಾಗಿ ಮದ್ಯ ಮಾರಾಟಗಾರರು ಫೂಲ್ ಖುಷ್ ಆಗಿದ್ದರೆ, ಮದ್ಯಪ್ರಿಯರು ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಾಳವಾಗಿವೆ.