ಬಾಗಲಕೋಟೆ prajakiran.com : ಪ್ರವಾಹ ಪೀಡಿತ ಪ್ರದೇಶಗಳ ಸ್ಥಿತಿಗತಿ ಅರಿಯಲು ಮಂಗಳವಾರ ಆಲಮಟ್ಟಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರಿಗೆ ಅಹವಾಲು ಸಲ್ಲಿಸಲು ಅವಕಾಶ ನೀಡದ ಹಿನ್ನಲೆಯಲ್ಲಿ ರೈತರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ನಿಡಗುಂದಿ ತಾಲೂಕಿನ ರೈತರಿಗೆ ಅಹವಾಲು ಸಲ್ಲಿಸಲು ಅವಕಾಶ ಕೊಟ್ಟಿಲ್ಲ ಎಂದು ಆರೋಪಿಸಿ ಆಲಮಟ್ಟಿ ಮುಖ್ಯದ್ವಾರದ ಬಳಿ ರೈತರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪೊಲೀಸ್ ಜೊತೆಗೆ ಕೆಲ ಕಾಲ ತಳ್ಳಾಟ ನೂಕಾಟ ನಡೆದಿದೆ. ಅಲ್ಲದೆ, ಮಾತಿನ ಜಟಾಪಟಿ ನಡೆದು, ರೈತ ವಿರೋಧಿ ಸರಕಾರಕ್ಕೆ […]
Tag: bjp
ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಸಂಚಲನ…!
ನವದೆಹಲಿ prajakiran.com : ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ. ಬಿಜೆಪಿ ಸೇರಲು ಪ್ರಮುಖ ಕಾರಣ ಪಕ್ಷ ಸಾಮಾನ್ಯ ಜನರೊಂದಿಗೆ ನಿಲ್ಲುತ್ತದೆ ಎಂಬ ವಿಶ್ವಾಸವಿದೆ. ಜೊತೆಗೆ ದೇಶದಲ್ಲಿ ಹೊಸ ಬದಲಾವಣೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಸೇರ್ಪಡೆಗೊಂಡಿದ್ದೇನೆ. ಅಲ್ಲದೆ, ರಾಜಕೀಯದಲ್ಲಿ ಯುವಕರಅವಶ್ಯಕತೆ ಇದೆ ಎಂಬುದನ್ನು ಮನಗಂಡು ಸೇರಿದ್ದೇನೆ ಎಂದರು. ಪೊಲೀಸ್ ಕಾರ್ಯವೈಖರಿ ಬೇರೆ, ನೀತಿ ನಿಯಮಗಳ ವಿಷಯ ಬಂದಾಗ ರಾಜಕೀಯ ಸೇರುವುದು ಅನಿವಾರ್ಯ ವಾಗಿತ್ತು. ಸಾಮಾಜಿಕ ವ್ಯವಸ್ಥೆ […]
ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಅಣ್ಣಾಮಲೈ
ನವದೆಹಲಿ prajakiran.com : ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ @annamalai_k ಅಣ್ಣಾಮಲೈ ಅವರು ಮಂಗಳವಾರ ನವದೆಹಲಿಯ ಪಕ್ಷದ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳಿಧರ್ ರಾವ್ @PMuralidharRao ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ @Murugan_TNBJP ಮುರುಗನ್ , ರಾಷ್ಟ್ರೀಯ ವಕ್ತಾರ @sambitswaraj ಸಂಬೀತ್ ಸ್ವರಾಜ್ ಉಪಸ್ಥಿತರಿದ್ದರು. ಇದೇ ವೇಳೆ ಅವರ ಸೇರ್ಪಡೆಗೆ ಕರ್ನಾಟಕದಲ್ಲಿ ಹುಮ್ಮಸ್ಸು ಮೂಡಿಸಿದ್ದು, ಹಲವರು ಸಚಿವರು, ಮುಖಂಡರು ಸ್ವಾಗತಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿದ್ದಾಗ ತಮ್ಮ ದಕ್ಷತೆಗೆ, ಕಾರ್ಯತತ್ಪರತೆಗೆ […]
ಬೆಳಗಾವಿ, ಬಾಗಲಕೋಟೆಯ ಪ್ರವಾಹ ಪ್ರೀಡಿತ ಪ್ರದೇಶಗಳ ವೈವಾನಿಕ ಸಮೀಕ್ಷೆ
ಬೆಳಗಾವಿ/ ಬಾಗಲಕೋಟೆ prajakiran.com : ಉತ್ತರಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಭವಿಸಿದ ಅಪಾರ ಹಾನಿಯ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ನಡೆಸಿದರು. ಬೆಳಗಾವಿಹಾಗೂ ಬಾಗಲಕೋಟೆ ಜಿಲ್ಲೆಯ ಹಲವು ಪ್ರದೇಶಗಳ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡರು. ಜನರಿಗೆ ಆದಅಪಾರ ಹಾನಿ ಕುರಿತು ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡರು. ಇದಕ್ಕು ಮುನ್ನ ಬೆಳಗಾವಿಯಲ್ಲಿಧಾರವಾಡ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಅಧಿಕಾರಿಗಳ […]
ಅತಿವೃಷ್ಟಿ ಹಾನಿ : 395.5 ಕೋಟಿ ಮುಂಗಡ ಬಿಡುಗಡೆ
ಬೆಂಗಳೂರು prajakiran.com : ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ರಾಜ್ಯದ ಮನವಿಗೆ ಕೂಡಲೇ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು SDRF ಫಂಡ್ ₹395.5 ಕೋಟಿ ಹಣವನ್ನು ಈಗ ಮುಂಗಡವಾಗಿ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ರಾಜ್ಯದ ಮನವಿಗೆ ಸ್ಪಂದಿಸಿದ […]
ಸಿಎಂ ಬಿ ಎಸ್ ವೈ ಭೇಟಿ ಮಾಡಿದ ಬಿ.ಎಲ್. ಸಂತೋಷ
ಬೆಂಗಳೂರು prajakiran.com : ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಶನಿವಾರ ಬೆಳಗ್ಗೆ ಸಿಎಂ ಬಿ ಎಸ್ ವೈ ಅವರ ಕಾವೇರಿ ನಿವಾಸಕ್ಕೆ ಭೇಟಿ ಮಾಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಗಣೇಶ ಚತುರ್ಥಿ ಸಂದರ್ಭದಲ್ಲಿಯೇ ಬಿ.ಎಲ್. ಸಂತೋಷ ಹಾಗೂ ಸಿಎಂ ಯಡಿಯೂರಪ್ಪ ಭೇಟಿ ಮಾಡಿರುವುದು ರಾಜ್ಯ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಬಿ.ಎಲ್. ಸಂತೋಷ ಅವರ ಈ ಭೇಟಿ ಹಿಂದೆ ರಾಜಕೀಯ ಕಾರಣಗಳಿವೆಯಾ, ಅಥವಾ ಕೇವಲ ಹಬ್ಬದ ಶುಭಾಶಯಕ್ಕಷ್ಟೇ ಸಿಮೀತವಾಗಿದೆಯಾ ಎಂಬ ಗುಸು […]
ತಾರಕಕ್ಕೇರಿದ ಸಿದ್ದರಾಮಯ್ಯ-ನಳೀನಕುಮಾರ್ ಕಟೀಲ್ ಟ್ವೀಟ್ ವಾರ್…!?
ಬೆಂಗಳೂರು prajakiran.com : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಅವರ ಟ್ವೀಟ್ ವಾರ ತಾರಕಕ್ಕೇರಿದೆ. ಪರಸ್ಪರ ಒಬ್ಬರಿಗೊಬ್ಬರು ಟ್ವೀಟರ್ ನಲ್ಲಿಯೇ ಕಾಲೆಳೆದುಕೊಂಡಿದ್ದು, ಅವರಅಭಿಮಾನಿಗಳು ಕೂಡ ಪರಸ್ಪರ ಟ್ವೀಟ್, ರಿಟ್ವೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ. ಅವರ ಟ್ವೀಟ್ ಗಳ ವಿವರ ಹೀಗಿದೆ ನೋಡಿ… ನಳೀನಕುಮಾರ್ ಕಟೀಲ್ ಅವರು, ಅಯ್ಯೊ @siddaramaiahನವರೆ, ಹಿಂದುಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ. ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದವರು ಯಾರು ಎಂಬುದು ಹಿಂದುಗಳು ಮರೆತಿಲ್ಲ. ನೀವು […]
ಸಂತೋಷಜಿ ಭೇಟಿ ಮಾಡಿದ ಇಬ್ಬರು ಸಚಿವರು…!
ಬೆಂಗಳೂರು prajakiran.com : ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಒಬ್ಬರಾಗಿರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಶುಕ್ರವಾರ ರಾಜ್ಯದ ಇಬ್ಬರು ಸಚಿವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಅದರಲ್ಲೂ ಎರಡು ಪ್ರಮುಖ ವಿಚಾರಗಳ ಕುರಿತು ಇಬ್ಬರು ಸಚಿವರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬಳಿ ಬೆಂಗಳೂರು ಡಿ.ಜೆ. ಹಳ್ಳಿ ಗಲಾಟೆ ಕುರಿತು ಸಂಪೂರ್ಣ ವರದಿ ಪಡೆದಿದ್ದಾರೆ. ಅಲ್ಲದೆ, ಮುಂದೆ ಕೈ ಗೊಳ್ಳಬೇಕಾದ ಕ್ರಮಗಳು ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು […]
ರಾಜ್ಯದ ಬಿಜೆಪಿ ಸರ್ಕಾರ 33 ಪರ್ಸೆಂಟೇಜ್ ಸರ್ಕಾರ ಎಂದ ಹೊರಟ್ಟಿ
ಧಾರವಾಡ prajakiran.com : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ರಾಜ್ಯದ ಬಿಜೆಪಿ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಿಜೆಪಿ ಸರ್ಕಾರದ ಮಾನ ಹರಾಜು ಹಾಕಿದರು. ಮಾತಿನುದ್ದಕ್ಕು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ರಬ್ಬರಸ್ಟ್ಯಾಂಪ್ ಮತ್ತು ಹೆಬ್ಬಟ್ಟು ರಾಜ್ಯಪಾಲ ಎಂದು ಜರಿದರು. ಸರ್ಕಾರ […]
ಧಾರವಾಡ ಜಿಲ್ಲೆಯ ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲ
ಧಾರವಾಡ prajakiran.com : ಜಿಲ್ಲೆಯಲ್ಲಿನ ಮಳೆ ಮತ್ತು ನೆರೆ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು. ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಕೆಲವು ಭಾಗಗಳಲ್ಲಿನ ನೆರೆ ಹಾವಳಿಯಿಂದ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ರೈತರ ಹೊಲದಲ್ಲಿನ ಬೆಳೆಗಳು ನಾಶವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟದ ಜಾಲಕ್ಕೆ ನೂಕಿದೆ. ಧಾರವಾಡ ಜಿಲ್ಲೆಯಲ್ಲಿ ಹರಿಯುವ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಇಕ್ಕೆಲೆಗಳಲ್ಲಿನ […]


