ರಾಜ್ಯ

ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಮತದಾರರು ಬೇಸತ್ತಿದ್ದಾರೆ

ಹುಬ್ಬಳ್ಳಿ PRAJAKIRAN.COM : ಬಿಜೆಪಿ ಹಾಗೂ ಪಕ್ಷಾಂತರಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಅನೈತಿಕ ರಾಜಕಾರಣಕ್ಕೆ ಮತದಾರರು ಬೇಸತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರ ಮಾತಿನಲ್ಲಿ ಆರ್ಭಟವಿದೆ ಹೊರತು ಅಭಿವೃದ್ಧಿ ಕೆಲಸದಲ್ಲಿಲ್ಲ ಎಂದು ಕುಟುಕಿದರು. ಬಿಜೆಪಿಯವರ ಪ್ರತಿಯೊಂದು ಹೆಜ್ಜೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಿದೆ. ಅವರಿಗೆ ಸಂವಿಧಾನ, ಕಾನೂನು, ನೈತಿಕತೆಯಲ್ಲಿ ನಂಬಿಕೆಯಿಲ್ಲ. ಯಾವುದೇ ಮಾರ್ಗವಾಗಲಿ ಅಧಿಕಾರ ಹಿಡಿಯಬೇಕು ಎಂದು ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಹದಿನೈದು ಕ್ಷೇತ್ರಗಳಲ್ಲಿ […]