ಕಲಬುರಗಿ : ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಮೇಲೆ ಕಣ್ಣು ಇಟ್ಟಿರುವ ಬಿಜೆಪಿಯ ಇಬ್ಬರು ನಾಯಕರು ಪರಸ್ಪರ ಕಿತ್ತಾಡಿಕೊಂಡಿರುವುದು ಕಲಬುರಗಿಯಲ್ಲಿ ನಡೆದಿದೆ. ಮಾಜಿ ಸಚಿವ ಬಾಬುರಾವ್ ಚವ್ಹಾಣ ಹಾಗೂ ಸುಭಾಷ ರಾಥೋಡ್ ಬಿಜೆಪಿ ಲೋಕಸಭಾ ಕ್ಷೇತ್ರದ ಟಿಕೇಟ್ ನೀಡುವಂತೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಬೆಂಬಲಿಗರ ನಡುವೆ ತಿಕ್ಕಾಟ ಕಂಡು ಕೆಂಡಾಮಂಡಲಗೊಂಡ ಯಡಿಯೂರಪ್ಪ ಮಾತಿನ ಚಕಮಕಿಗೆ ಬ್ರೇಕ್ ಹಾಕಿಸಿದರು. ಅಲ್ಲದೆ, ಲಂಬಾಣಿ ಸಮುದಾಯದ ಮುಖಂಡರನ್ನು ಪರಿಗಣಿಸಲಾಗುವುದು. ಒಟ್ಟಾರೆ ಕಲಬುರಗಿ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲಬೇಕು. ಸಮ್ಮೀಕ್ಷೆ ಮೂಲಕ ಹೆಸರು ಬರಲಿ […]
ಧಾರವಾಡ : ಭೀಕರ ಮಳೆಯಿಂದ ಹಾಳಾಗಿ ಹೋಗಿರುವ ಕೊಡಗಿಗೆ ನೆರವು ನೀಡುವುದರಲ್ಲಿ ಕೇಂದ್ರ ಸರಕಾರ ತಾರತಮ್ಮ ನೀತಿ ಅನುಸರಿಸುತ್ತಿದೆ ಎಂದು ನಾಡೋಜ ಡಾ ಪಾಟೀಲ ಪುಟ್ಟಪ್ಪ ಕಿಡಿಕಾರಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಷ್ಟೇ ಅನಾಹುತ ಕೊಡಗಿನಲ್ಲೂ ಆಗಿದೆ. ಇದು ಕೇಂದ್ರದವರಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನೂರಾರು ವರ್ಷಗಳಿಂದ ಕೊಡಗಿಗೆ ನಿರಂತರವಾಗಿ ಅನ್ಯಾಯವಾಗುತ್ತಾ ಬಂದಿದೆ. ಕೊಡಗು ಈ ಹಿಂದೆ ಸ್ವತಂತ್ರ ರಾಜ್ಯವಾಗಿತ್ತು. ಕೊಡಗುನ್ನು ಯಾರಿಗೂ ಸೋಲಿಸಲು ಆಗಿರಲಿಲ್ಲ. ದೊಡ್ಡ ರಾಜೇಂದ್ರ ಮಹಾರಾಜರ ಕಾಲಾವಧಿಯಲ್ಲಿ ಸಾಕಷ್ಟು ಪ್ರಗತಿ […]
ಧಾರವಾಡ : ಕೊಡಗು ಮತ್ತು ಕೇರಳದಲ್ಲಿ ಆಗುತ್ತಿರುವ ಜಲ ಪ್ರಳಯಕ್ಕೆ ಅಲ್ಲಿಯ ಕಾಡನ್ನು ಕಡಿದು ಕಾಫಿ ತೋಟಗಳನ್ನಾಗಿ ಮಾಡಿರುವುದು ಹಾಗೂ ಅರಣ್ಯ ಭೂಮಿಯ ಒತ್ತುವರಿಯೇ ಕಾರಣ ಎಂದು ನಿವೃತ್ತ ಉಪ ಅರಣ್ಯ ಸಂರಕ್ಷಕ ಎಸ್.ಎನ್. ಕುಲಕರ್ಣಿ ಹೇಳಿದ್ದಾರೆ. ಅವರು ಧಾರವಾಡದ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಓರಾಂಗುಟನ್ ದಿನಾಚರಣೆಯಲ್ಲಿ ಮಾತನಾಡಿದರು. ಅಭಿವೃದ್ದಿ ಕಾರ್ಯಗಳು ಎಲ್ಲವೂ ಅರಣ್ಯ ನಾಶದಲ್ಲಿ ಕೊನೆಗೊಳ್ಳುತ್ತಿವೆ. ಪ್ರಕೃತಿ ಮಾತೆ ತನ್ನ ಶಕ್ತಿ ಮೀರಿ ನಾವು ನೀಡಿದ ಎಲ್ಲ ನೋವುಗಳನ್ನು ಸಹಿಸಿಕೊಳ್ಳುತ್ತಾಳೆ. […]