ಧಾರವಾಡ : ಪಾಪಿ ಪಾಕಿಸ್ತಾನದ ವಿರುದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಬಹಿರಂಗ ಸವಾಲು ಹಾಕಿದ್ದಾರೆ.
ಅವರು ಮಂಗಳವಾರ ಧಾರವಾಡದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಮಾತನಾಡಿದರು.
ಉಗ್ರರ ಮೇಲಿನ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿಯವರು ಮಾಡಿರುವ ಈ ಕೆಲಸವನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದ ಅವರು ೧೯೭೨ರಲ್ಲಿಯೇ ಇಂದಿರಾ ಗಾಂಧಿ ಪಾಕ್ ಗೆದ್ದಿದ್ದಾರೆ. ಹೀಗಾಗಿ ನಾವು ಕೂಡ ಈಗ ಪಾಕ್ ಗೆದ್ದು ತೋರಿಸಿ ಅಂತಾ ಮೋದಿಯವರನ್ನು ಕೇಳುತ್ತೇವೆ ಎಂದು ಹೇಳಿದರು.
ಇದಕ್ಕೆ ನಾವೆಲ್ಲ ಭಾರತೀಯರೆಲ್ಲ ಬೆಂಬಲಕ್ಕೆ ನಿಲ್ಲುತ್ತೇವೆ. ಸಾಕಷ್ಟು ಸಲ ಸರ್ಜಿಕಲ್ ಸ್ಟ್ರೈಕ್‌ಗಳು ಆಗಿವೆ. ಹಿಂದಿನಿಂದಲೂ ಸರ್ಜಿಕಲ್ ಸ್ಟ್ರೈಕ್ ಆಗಿವೆ. ಮನಮೋಹನ ಸಿಂಗ್ ಅವರು ಪ್ರಧಾನಮಂತ್ರಿ ಆಗಿ ಇದ್ದಾಗ ೨೩ ಸಲ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಸ್ಮರಿಸಿದರು.
ದಿವಂಗತ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಕೂಡ ಅವರು ಪಾಕಿಸ್ತಾನದ ವಿರುದ್ದ ಯಾವತ್ತೂ ಹಿಂದೆ ಸರಿದಿಲ್ಲ. ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಹಿಂದೆ ಸರಿದಿಲ್ಲ ಎಂದು ಮೆಲಕು ಹಾಕಿದರು.
ಹೀಗಾಗಿ ನಾವು ಮೋದಿಯವರು ಪಾಕ್ ಗೆದ್ದು ತೋರಿಸಲಿ ಎಂದು ಹೇಳುತ್ತಿದ್ದೇವೆ. ದೇಶಭಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ದೇಶಾಭಿಮಾನ ಎಲ್ಲ ಪಕ್ಷಗಳಿಗೂ ಇದೆ. ನಮ್ಮ ಪಕ್ಷ ಸ್ವತಂತ್ರ ಹೋರಾಟದಿಂದ ಬಂದಿರುವಂತಹುದು.
ಎಲ್ಲರಕ್ಕಿಂತ ನಮಗೆ ದೇಶಾಭಿಮಾನ ಜಾಸ್ತಿ ಇದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೊಂಡರು.
Winning a another country is not like a purchasing a Buffalo.. NaMo knw wt t do in what situation He won’t need a suggestion
ಕುಲಕರ್ಣಿಯವರೇ ಪಕ್ಷ ಮರೆತು ದೇಶಪ್ರೇಮಿ ಆಗಿ ನೀವು