- ಕರೋನಾ ಸೋಂಕಿನ ಬಗ್ಗೆ ಭಯಪಡದೇ ಎಚ್ಚರವ ಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಲ್ಲ ಕ್ರಮಗಳನ್ನು ಅನುಸರಿಸಬೇಕು.
- ದಿನಕ್ಕೆರಡು ಬಾರಿ ಅರ್ಧ ಘಂಟೆ ಪ್ರಾಣಾಯಾಮ, ಯೋಗ ಮಾಡಬೇಕು.
- ಆಯುರ್ವೇದದಲ್ಲಿ ಹೇಳಿದಂತೆ ದಿನಚರ್ಯ(ದಿನಚರಿ), ಋತುಚರ್ಯ (ಋತುವಿಗೆ ಅನುಸಾರ ಅನುಕರಣೆ), ಸದ್‌ವೃತ್ತ (ಸದಾಚಾರಗಳ ಮೂಲಕ ಮಾನಸಿಕ ಅರೋಗ್ಯ ಪಾಲನೆ)ಗಳನ್ನು ಅನುಸರಿಸಬೇಕು.
- ರೋಗ ನಿರೋಧಕ ಶಕ್ತಿ ಮತ್ತು ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
- ದಿನಕ್ಕೆ ಎರಡು ಬಾರಿ ಒಂದು ಗ್ಲಾಸು ಹಾಲಿಗೆ ಅರ್ಧ ಚಮಚೆ ಅರಿಶಿಣ ಮಿಶ್ರಣ ಮಾಡಿ ಸೇವಿಸಬೇಕು.
- ದಿನಕ್ಕೆರಡು ಬಾರಿ ತುಳಸಿ, ದಾಲಚಿನ್ನಿ, ಮೆಣಸು, ಒಣಶುಂಠಿ, ಒಣದ್ರಾಕ್ಷಿಗಳಿಂದ ತಯಾರಿಸಿದ ಕಷಾಯಕ್ಕೆ ಬೆಲ್ಲ ಅಥವಾ ಲಿಂಬೆರಸವನ್ನು ಬೆರೆಸಿ ಕುಡಿಯಬೇಕು.
- ಆಹಾರದಲ್ಲಿ ಅರಿಶಿಣ, ಜೀರಿಗೆ, ಹಸಿಶುಂಠಿ, ಕೊತಂಬರಿ ಬೀಜ, ಪುದಿನ, ಬೆಳ್ಳೊಳ್ಳಿಗಳನ್ನು ಹೆಚ್ಚಾಗಿ ಬಳಸಿರಿ.
- ಗಂಟಲು ಕೆರೆತ, ಕೆಮ್ಮುಗಳಿದ್ದರೆ ದಿನಕ್ಕೊಮ್ಮೆ ಪುದಿನ ಎಲೆ ಅಥವಾ ಅಜವಾನ ಕಾಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರಿಂದ ಬರುವ ಹಬೆಯನ್ನು ತೆಗೆದುಕೊಳ್ಳಿರಿ.
- ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ೨-೩ ಬಾರಿ ಸೇವಿಸಿರಿ.
Please follow and like us:
