ರಾಜ್ಯ

ಒಂದೇ ದಿನ ಬರೋಬ್ಬರಿ 388 ಸೋಂಕು ಪತ್ತೆ : ಉಡುಪಿಯಲ್ಲಿ150, ಕಲಬರುಗಿಯಲ್ಲಿ 100, ಬೆಳಗಾವಿ 51

ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ಆರ್ಭಟವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.

ಮಂಗಳವಾರ ಒಂದೇ ದಿನ ಬರೋಬ್ಬರಿ 388 ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಉಡುಪಿಯಲ್ಲಿ 150, ಕಲಬರುಗಿಯಲ್ಲಿ 100 ಸೋಂಕಿತರು ದೃಢಪಟ್ಟಿದ್ದಾರೆ.

ಆ ಮೂಲಕ ರಾಜ್ಯದಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 3796ಕ್ಕೆ ಏರಿದೆ. ಇಂದು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಒಟ್ಟು 75 ಜನ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 1403ಕ್ಕೆ ಏರಿಕೆಯಾಗಿದೆ.

ಇದರಲ್ಲಿ 2339 ಸಕ್ರಿಯ ಪ್ರಕರಣಗಳಿದ್ದು, 14 ಜನ ಮಾತ್ರ ಐಸಿಯುನಲ್ಲಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 52ಕ್ಕೆ ಬಂದು ನಿಂತಿದೆ.

ಅದರಲ್ಲಿ 363 ಮಹಾರಾಷ್ಟ್ರದಿಂದಲೇ ಬಂದವರಿದ್ದರೆ, ಕೇವಲ 4 ಜನ ಮಾತ್ರ ದೆಹಲಿಯಿಂದ ಬಂದಿದ್ದಾರೆ. ಕೇವಲ 29 ಸೋಂಕಿತರು ಮಾತ್ರ ಬೇರೆ ಕಡೆಯವರು ಹಾಗೂ ಸೋಂಕಿತರ ಸಂಪರ್ಕದಿಂದ ತಗುಲಿದವರಿದ್ದಾರೆ.

ಇದರಲ್ಲಿ ದಾವಣಗೆರೆಯಲ್ಲಿ ಕೇವಲ 2.5 ತಿಂಗಳ ಮಗುವಿಗೆ ಮಹಾಮಾರಿ ಕರೋನಾ ಸೋಂಕು ವಕ್ಕರಿಸಿರುವುದು ಜಿಲ್ಲೆಯ ಜನತೆಯನ್ನಷ್ಟೇ ಅಲ್ಲದೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಬೆಳಗಾವಿ 51, ರಾಯಚೂರು 16, ಬೆಂಗಳೂರು 12, ಬೀದರ 10, ಹಾಸನ 9, ಬಾಗಲಕೋಟೆ 9, ದಾವಣಗೆರೆ 7, ಯಾದಗಿರಿ 5, ಮಂಡ್ಯ 4, ವಿಜಯಪುರ 4, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ 2, ಧಾರವಾಡ 2, ತುಮಕೂರ 2, ಹಾವೇರಿ ಹಾಗೂ ಕೋಲಾರದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 410 ಸೋಂಕಿತರನ್ನು ಹೊಂದಿ ರಾಜ್ಯದ ನಂಬರ್ ಒನ್ ಜಿಲ್ಲೆಯಾಗಿದೆ. ಕಲಬುರಗಿ 2ನೇ ಸ್ಥಾನ ಪಡೆದಿದ್ದು, ಅಲ್ಲಿ 405 ಪ್ರಕರಣಗಳಿದ್ದು, ಬೆಂಗಳೂರು 3ನೇ ಸ್ಥಾನಬಂದಿದ್ದು, ಅಲ್ಲಿ 397 ಸೋಂಕಿತರಾಗಿದ್ದಾರೆ.

Please follow and like us:
PK Team
1999ರಲ್ಲಿ ಕಾನೂನು ಪದವಿ ಓದುತ್ತಿರುವಾಗಲೇ ಉತ್ತರ ಕರ್ನಾಟಕ ಕನ್ನಡ ದಿನ ಪತ್ರಿಕೆಯ ಕಲಬುರಗಿ ಜಿಲ್ಲೆಯ ವರದಿಗಾರನಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಾಗರಾಜ ಕಿರಣಗಿ ಅವರು ಆ ಪತ್ರಿಕೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಆನಂತರ 2002ರಲ್ಲಿ ಕಲಬುರಗಿ ಜಿಲ್ಲೆಯಿಂದ ಬೀದರ್ ಜಿಲ್ಲೆಯ ಉದಯ ಟಿವಿ ವರದಿಗಾರನಾಗಿ ಪ್ರಯಾಣ ಬೆಳೆಸಿದರು. 2002ರ ಜೂನ್ ನಿಂದ 2005ರ ಡಿಸೆಂಬರ್ ವರೆಗೆ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ, 2006ರ ಜನವರಿಯಿಂದ ಧಾರವಾಡ ಜಿಲ್ಲೆಯ ಈ ಟಿವಿ ಕನ್ನಡ ವರದಿಗಾರರಾಗಿ ಸೇವೆ ಪ್ರಾರಂಭಿಸಿದರು. 2006ರಿಂದ 2008ರ ವರೆಗೆ ಧಾರವಾಡದಲ್ಲಿ ಕೆಲಸ ಮಾಡಿದ ಬಳಿಕ 2008ರಿಂದ 2009ರ ನವೆಂಬರ್ ವರೆಗೆ ಗದಗ,ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಜೀ ಕನ್ನಡ ವಾಹಿನಿ ವರದಿಗಾರನಾಗಿ ಕೆಲಸ ನಿರ್ವಹಿಸಿದರು. 2009ರ ಡಿಸೆಂಬರ್ ನಿಂದ 2011ರ ಎಪ್ರಿಲ್ ವರೆಗೆ ಹಾಸನ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡಿದರು. ಆ ಬಳಿಕ 2011ರ ಮೇ ನಿಂದ ಬಳ್ಳಾರಿ ಜಿಲ್ಲೆಯ ಉದಯವಾಣಿ ಕನ್ನಡ ದಿನಪತ್ರಿಕೆ ವರದಿಗಾರರಾಗಿ ಕಾರ್ಯ ನಿರ್ವಹಿಸಿ, 2012ರ ಜನೆವರಿಯಿಂದ 2016ರ ಮೇ ವರೆಗೆ ವಿಜಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ, ಆ ಬಳಿಕ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. 2016ರಿಂದ 2017 ರವರೆಗೆ ಧಾರವಾಡ ಜಿಲ್ಲೆಯ ಸಿ 9 ನ್ಯೂಸ್ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅದಾದ ಬಳಿಕ ಮತ್ತೆ 2017ರಿಂದ 2018ರ ಮಾರ್ಚ್ ವರೆಗೆ ಧಾರವಾಡ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಸೇವೆ ಸಲ್ಲಿಸಿದ ನಾಗರಾಜ ಕಿರಣಗಿ ಅವರು ತಮ್ಮ ನೆಚ್ಚಿನ ಗುರುಗಳು, ಮಾರ್ಗದರ್ಶಕರು ಆಗಿರುವ ಹಿರಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರಖ್ಯಾತ ನಾಟಿ ವೈದ್ಯರಾದ ಶ್ರೀ ಶಶಿಕಾಂತ ವಿ. ದೇವಾಡಿಗ ಅವರ ಸಲಹೆ ಮೇರೆಗೆ ಸುದೀರ್ಘ 20 ವರ್ಷಗಳ ಅನುಭವದ ಆಧಾರದ ಮೇಲೆ ತಮ್ಮದೇ ಆದ ಪ್ರಜಾಕಿರಣ ಮೀಡಿಯಾ ಹೌಸ್ ಸ್ಥಾಪಿಸಿ, ಅದರ ಮೂಲಕ www.prajakiran. com online news portal ಹಾಗೂ prajakiran YouTube channel ಮುನ್ನಡೆಸುತ್ತಿದ್ದಾರೆ. ' ಕೇವಲ ಮೂರು ವರ್ಷಗಳ ನಂತರ ನಿಮ್ಮ ನೆಚ್ಚಿನ(ಪ್ರಜಾಕಿರಣ.ಕಾಮ್) Prajakiran.com ನಲವತ್ತು ಲಕ್ಷ ಓದುಗರನ್ನು ಹೊಂದಿದ ಸಾರ್ಥಕ ಭಾವ, ಯೂಟ್ಯೂಬ್ ಚಾನಲ್ ಒಂದು ಕೋಟಿ ಇಪ್ಪತ್ತು ಲಕ್ಷ ವೀಕ್ಷಕರನ್ನು ಹೊಂದಿರುವ ಸಂಭ್ರಮ, follow/like: Prajakiran News ಫೇಸ್ ಬುಕ್ ಪೇಜ್ ಐದು ಸಾವಿರ ಗಡಿ ತಲುಪಿರುವ ಸಮಾಧಾನ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ಅದು ಸದಾ ಕಾಲ ಹೀಗೆ ಇರಲಿ ನಾಗರಾಜ ಕಿರಣಗಿ
http://prajakian.com

Leave a Reply

Your email address will not be published. Required fields are marked *