ಬೆಳಗಾವಿ prajakiran.com : ಏಳು ತಿಂಗಳ ಹೆಣ್ಣು ಮಗುವಿನಲ್ಲಿ ಮಹಾಮಾರಿ ಕರೋನಾ ಸೋಂಕು ವಕ್ಕರಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿರುವ ಕಲ್ಲೂರ ಗ್ರಾಮವನ್ನು ಕರೋನಾ ಸೋಂಕಿನ ಪ್ರಕರಣ ಕಂಡು ಬಂದ ಬೆನ್ನಲೇ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ಪರಿಶೀಲನೆ ನಡೆಸಿದರು.
ಗ್ರಾಮಕ್ಕೆ ಪ್ರವೇಶಿಸುವ ಪ್ರಮುಖ ದ್ವಾರ ಬಾಗಿಲು ಬಂದ ಮಾಡಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಅಲ್ಲದೆ, ಈಗಾಗಲೇ ಸೋಂಕಿತ ಮಗುವಿನ ಸಂಬಂಧಿಕರನ್ನು ಕ್ವಾರೆಂಟೆನ್ ಬೆಳಗಾವಿ ಜಿಲ್ಲಾಡಳಿತ ಮಾಡಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿಗೆ ರಾಮದುರ್ಗ ತಹಶೀಲ್ದಾರ ಗಿರೀಶ್ ಸ್ವಾದಿ ಸಾಥ್ ನೀಡಿದರು.
ಕಲ್ಲೂರು ಗ್ರಾಮಕ್ಕೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಬಂದೋಬಸ್ತ್ ಕುರಿತು ಮಾಹಿತಿ ಸಂಗ್ರಹಿಸಿದರು.
