ನವದೆಹಲಿ : ದೇಶದೆಲ್ಲಡೆ ಶನಿವಾರ 70ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ನವದೆಹಲಿಯ ರಾಜಪಥ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಲೆಪ್ಟಿನೆಂಟ್ ಜನರಲ್ ಅಮಿತ್ ಮೀಸ್ತ್ರಿ ನೇತೃತ್ವದ ತಂಡದಿಂದ ಆಕರ್ಷಕ ಪಥ ಸಂಚಲನ ಜರುಗಿತು. ಮೇಜರ್ ಜನರಲ್ ರಾಜಪಾಲ್ ಪುನೀಯಾ, ಗೋವಿಂದ್ ಸಿಂಗ್, ಅವರ ತಂಡ ಸೇರಿದಂತೆ ಅನೇಕ ಪರಮವೀರ್ ಚಕ್ರ ಪುರಸ್ಕೃತ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು.
ಭೂಸೇನೆ, ವಾಯು ಸೇನೆ, ಅಶ್ವಶಕ್ತಿ ಸೇನಾ, ಯುದ್ದ ಟ್ಯಾಂಕರ್, ಭಾರತೀಯ ಸೇನೆ, ಸೇರಿದಂತೆ ಅನೇಕ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆಕರ್ಷಕ ಪಥ ವಿಕ್ಷಿಸಲು ಲಕ್ಷಾಂತರ ಜನರು ರಾಜ ಪಥ್ ನ ಎರಡು ಮಗ್ಗಲುಗಳಲ್ಲಿ ನೆರೆದಿದ್ದರು.
ರಾಷ್ಟ್ರ ರಾಜಧಾನಿ ನವದೆಹಲಿಗೆ ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷ ಸಿರಿಲ್ ರಾಮಪೋಸಾ ಆಗಮಿಸಿದ್ದರು.
ಇದೇ ವೇಳೆ ನಜೀರ್ ಅಹ್ಮದ ವಾನಿಗೆ ಮರಣೋತ್ತರ ಅಶೋಕ ಚಕ್ರ ನೀಡಿ ಗೌರವಿಸಲಾಯಿತು. ಆರು ಯೋಧರನ್ನು ಕೊಂದು ವೀರ ಮರಣವನ್ನಪ್ಪಿದ್ದ ನಜೀರ್ ಅಹ್ಮದ ವಾನಿ ಅವರು ಸಮರ್ಥವಾಗಿ ಉಗ್ರರನ್ನು ಎದುರಿಸಿ, ಕೋಣೆಯಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ಮೇಲೆ ಬಾಂಬ್ ದಾಳಿ ಎಸೆದು ಅವರ ಹುಟ್ಟು ಅಡಗಿಸಿದ ಲ್ಯಾನ್ಸ್ ನಾಯಕ ಲಾನಿ ವೀರ ಮರಣವನ್ನು ಕೊಂಡಾಡಿ ಅವರ ಪತ್ನಿಗೆ ಮರಣೋತ್ತರ ಅಶೋಕ ಚಕ್ರ ಪ್ರದಾನ ಮಾಡಿದರು.
ಈ ಸಮಾರಂಭಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕರು ಸಾಕ್ಷಿಯಾದರು.
ಇದೇ ವೇಳೆ ಬೆಂಗಳೂರಿನ ಮಾಣಿಕ್ ಶಹಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಅನೇಕರು ಸಾಕ್ಷಿಯಾದರು.
ಭಾರತೀಯ ಸೇನೆ, ವಾಯು ಸೇನೆ, ಕರ್ನಾಟಕ ಪೊಲೀಸ್ ಸೇರಿದಂತೆ ಅನೇಕ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲರು, ಬಳಿಕ ಆಕರ್ಷಕ ಪಥ ಸಂಚಲನ ವೀಕ್ಷಿಸಿದರು.