ನವದೆಹಲಿ prajakiran.com :ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ 9 ಹಿಜ್ಬುಲ್ ಮುಜಾಹಿದ್ದೀನ್ ನ ಮೂವರು ಕಮಾಂಡರ್ ಸೇರಿ ಒಂಬತ್ತು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದೆ.
ಪಂಜೋರಾ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಬೇಹುಗಾರಿಕೆ ಸಂಸ್ಥೆಯೂ ನೀಡಿದ ಸುಳಿವಿನ ಮೇರೆಗೆ ಸೇನೆ, ಕೇಂದ್ರೀಯ ಮೀಸಲು ಪಡೆಯ ಪಡೆ (ಸಿ ಆರ್ ಪಿ ಎಫ್ ) ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಶೋಪಿಯಾನ್ ನಲ್ಲಿ ಬೆಳಗಿನ ಜಾವ 3 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸತತ ನಾಲ್ಕು ಗಂಟೆಗಳ ಕಾಲ ನಡೆಯಿತು.
ಈ ಭಯೋತ್ಪಾದಕರು 2019ರಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಕೊಲೆ, ಪೊಲೀಸರಅಪಹರಣ, ಟ್ರಕ್ ಚಾಲಕರಅಪಹರಣ ಹಾಗೂ ಕಿರುಕುಳ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ವಿಕ್ಟರ್ ಪೋರ್ಸ್ ನ ಜನರಲ್ ಆಫೀಸರ್ ಕಮಾಂಡರ್ ಮೇಜರ್ ಜನರಲ್ ಎ. ಸೇನ್ ಗುಪ್ತಾ ತಿಳಿಸಿದ್ದಾರೆ.
ರೆಬಾನ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದ ಇನ್ನೊಂದು ಎನ್ ಕೌಂಟರ್ ನಲ್ಲಿ ಐದು ಭಯೋತ್ಪಾದಕರು ಸಾವಿಗೀಡಾಗಿದ್ದಾರೆ.
ಒಬ್ಬ ಏರಿಯಾ ಕಮಾಂಡರ್ ಹಾಗೂ ಮತ್ತೊಬ್ಬ ವಿದೇಶಿ ಪ್ರಜೆ ಭಯೋತ್ಪಾದಕರ ಗುಂಪಿನಲ್ಲಿದ್ದ ಎಂದು ವಿವರಿಸಿದ್ದಾರೆ. ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲು ಉಗ್ರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಆಗ ಹೆಚ್ಚುವರಿ ಭದ್ರತಾ ಪಡೆಗಳನ್ನು ಕರೆಸಿ, ಇಂಟರ್ ನೆಟ್ ಸ್ಥಗಿತಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದರು.