ತಾಳಿಕೋಟಿ : ಈ ಹಿಂದೆ ಎಸ್.ಆರ್. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಹೆಚ್.ಡಿ. ದೇವೇಗೌಡ ಕೆಳಗಿಸಿದ್ದರು. ಆನಂತರ ಎನ್. ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗ ಈಗಿನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೆಳಗಿಸಿದ್ದರು. ಅವರಿಗೆ ಮೊದಲಿನಿಂದಲೂ ಉತ್ತರ ಕರ್ನಾಟಕ ಅಂದರೆ ಕಡೆಗಣನೆ ಸಾಮಾನ್ಯ ಎಂದು ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕಿಡಿಕಾರಿದ್ದಾರೆ.
ಅವರು ಶನಿವಾರ ತಾಳಿಕೋಟೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಧರ್ಮಸಿಂಗ್ ಕೆಳಗಿಯಲು ನಾನೇ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಒಪ್ಪಿಕೊಂಡಿದ್ದಾರೆ. ಅವರಿಗೆ ಬಹಳಷ್ಟು ದುರಂಹಕಾರ ಬಂದಿದೆ. ಈ ಭಾಗದ ರೈತರು, ಸಂಘಟನೆಗಳು ಹೋರಾಟ ಮಾಡಿದರೆ ನಿಮಗೆ ಯಾವ ನೈತಿಕತೆ ಇದೆ. ನೀವು ನನಗೆ ವೋಟ್ ಹಾಕಿದ್ದಾರೆಯೇ, ಜಾತಿ ಮತ ನೋಡಿ ವೋಟ್ ಹಾಕಿದ್ದಾರೆ ಎಂದು ಹೇಳುವ ಮೂಲಕ ಅಹಂದಿಂದ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು : ರಾಜ್ಯದ ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಸ್ಥಳೀಯ ಸಂಸ್ಥೆಯ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಗೆ ದಾಖಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮೀಸಲಾತಿ ಪ್ರಶ್ನಿಸಿ ಈ ಮೂರು ಸ್ಥಳೀಯ ಸಂಸ್ಥೆಗಳ ಕೆಲ ಜನಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಹಿನ್ನಲೆಯಲ್ಲಿ ಈ ಮೂರು ಸ್ಥಳೀಯ ಸಂಸ್ಥೆಗಳನ್ನು ಬಿಟ್ಟು ರಾಜ್ಯ ಚುನಾವಣಾ ಆಯೋಗ ಉಳಿದ 105 ಸಂಸ್ಥೆಗಳಿಗೆ ಚುನಾವಣಾ ದಿನಾಂಕ ಘೋಷಿಸಿತ್ತು. ಈ ಮೂರಕ್ಕೆ ಮಾತ್ರ ಘೋಷಿಸಿರಲಿಲ್ಲ. ಇದೀಗ ಆ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕವನ್ನು […]
ಕೊಡಗು : ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಪತ್ನಿ ಅನಿತಾ ಸಮೇತ ಸಮೇತ ಬಾಗೀನ ಅರ್ಪಿಸಿದರು. ಬಳಿಕ ಮಾತನಾಡಿದಅವರು 37 ವರ್ಷಗಳ ನಂತರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯ ಎಲ್ಲ ನದಿ ಹಾಗೂ ಜಲಾಶಯಗಳು ತುಂಬಿ ಹರಿಯುತ್ತಿವೆ. ದೇವರ ಅನುಗ್ರಹದಿಂದ ರಾಜ್ಯದ ಎಲ್ಲ ಜಲಾಶಯಗಳು ಕೂಡ ಭರ್ತಿಯಾಗಿವೆ ಎಂದರು. ಅವರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಸಹೋದರ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಸಾಥ್ ನೀಡಿದರು. ನಾಳೆ […]
ಧಾರವಾಡ : ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಆರಾಧ್ಯ ದೇವರಾದ ಶ್ರೀ ಮರಡಿ ಬಸವಣ್ಣ ದೇವರ ಗೂಳಿಯೂ ಗುರುವಾರ ಅಕಾಲಿಕ ನಿಧನ ಹೊಂದಿದೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಅದರ ಸಾವಿಗೆ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರು ಮಮ್ಮಲ ಮರುಗಿದರು. ಅದು ವಿವಿಧ ಪವಾಡಗಳನ್ನು ಮಾಡುತ್ತಾ ಭಕ್ತರ ಉದ್ಧಾರ ಮಾಡಿತ್ತು ಎಂಬ ಪ್ರತೀತಿಯಿತ್ತು. ಹೀಗಾಗಿ ಭಕ್ತರನ್ನು ಬಿಟ್ಟು ಲಿಂಗೈಕ್ಯವಾದ ಬಸವಣ್ಣನ ಸಾವನ್ನು ಭಕ್ತರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಗ್ರಾಮಸ್ಥರು ರಾತ್ರಿಯಿಡಿ ಜಾಗರಣೆ ಮಾಡಿದಲ್ಲದೆ, ಅದಕ್ಕೆ ವಿಶೇಷ […]