- ಬೆಳ್ಳಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು 1 ಗ್ಲಾಸ್ ಕಬ್ಬಿನ ಹಾಲನ್ನು ಸೇವಿಸುವುದರಿಂದ ರಕ್ತದ ಕೊರತೆ ದೂರ ವಾಗುತ್ತದೆ.
- ಮೂಲಂಗಿ ಹಾಗೂ ದಾಳಿಂಬೆ ಹಣ್ಣಿನ ರಸಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಸೇವಿಸಬೇಕು.
- ದಾಳಿಂಬೆ ಹಣ್ಣಿನ ಬೀಜಗಳನ್ನು ಸೇವಿಸಿದ ಮೇಲೆ ಪಪ್ಪಾಯಿ ಹಣ್ಣಿನ ರಸ ಸೇವಿಸಬೇಕು.
- ಒಂದು ಕಪ್ ಗಜರಿ ರಸ, ಅರ್ಧ ಕಪ್ ಬಿಟ್ ರೂಟ್ ರಸ, ಅರ್ಧ ಕಪ್ ಪಾಲಕ ರಸ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ರಕ್ತದ ಕೊರತೆ ನಿವಾರಣೆಯಾಗುತ್ತದೆ.
- ಹಸುವಿನ ಹಾಲಿನಿಂದ ಮಾಡಿದ ಮಜ್ಜಿಗೆ ಒಂದು ಲೋಟ ಹಾಗೂ ಐದು ಗ್ರಾಂ ಹುರಿದ ಅರಸಿನ ಪುಡಿ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
- ಒಂದು ಗ್ಲಾಸ್ ಹಸುವಿನ ಹಾಲು, ಎರಡು ಚಮಚ ಹಸುವಿನ ತುಪ್ಪ ಬೆರಸಿ ದಿನಕ್ಕೆ ನಾಲ್ಕು ಬಾರಿ ಸೇವಿಸಬೇಕು.
- ಅರ್ಧ ಕಪ ದಾಳಿಂಬೆ ರಸಕ್ಕೆ ಒಂದು ಕಪ್ ಮೂಲಂಗಿ ರಸ, ಎರಡು ಚಮಚ ಲಿಂಬೆ ರಸ ಸೇರಿಸಿ ಸೇವಿಸಬೇಕು.
- ಅರ್ಧ ಕಪ್ ಪಾಲಕ್ ರಸಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿ ನಿಧಾನವಾಗಿ ಸೇವಿಸಬೇಕು. ನಿತ್ಯ ಮೂರು ವಾರ ಸೇವಿಸಬೇಕು.
- ಅರ್ಧ ಗ್ಲಾಸ್ ಕಬ್ಬಿಣ ರಸಕ್ಕೆ ಅರ್ಧ ಗ್ಲಾಸ್ ಪಪ್ಪಾಯಿ ಹಣ್ಣಿನ ರಸ ಸೇರಿಸಿ ಸೇವಿಸುವುದರಿಮದ ರಕ್ತದ ಹೀನತೆಗೆ ಪರಿಹಾರ ಆಗುತ್ತದೆ.
- ಅಡುಗೆಯಲ್ಲಿ ಬಿಟ್‍ರೂಟ್ ಹೆಚ್ಚು ಬಳಸುವುದರಿಂದ ರಕ್ತದ ಹೀನತೆ ಪರಿಹಾರ ಆಗುವುದು.
- ಖರ್ಜೂರ ಸೇವನೆಯಿಂದ ರಕ್ತದ ಹೀನತೆ ಪರಿಹಾರ ಮಿತವಾಗಿ ಸೇವಿಸಬೇಕು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು
