- ಆಯುರ್ವೇದದಲ್ಲಿ ಹೆಸರಾಂತ ತ್ರಿಫಲಾ ಚೂರ್ಣದಲ್ಲಿ ಇದೊಂದುಹಣ್ಣು ಆಗಿದೆ.
- ಅಣಲೆ ಚೂರ್ಣವನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಸರ್ವರೋಗಗಳನ್ನು ಜಯಿಸುತ್ತದೆ.
- ಗೋಮೂತ್ರದಿಂದ ಅಣಲೆ ಕಾಯಿಯ ಪಲ್ಯ ಪ್ರಾರಂಭದಲ್ಲಿಯೇ ಸೇವಿಸಿದರೆ ಆನೆಕಾಲು ರೋಗ ಶಮನವಾಗುತ್ತದೆ.
- ಚೆನ್ನಾಗಿ ಬಲಿತ (ಬೀಜ ತೆಗೆದ) ಅಳಲೆ ಕಾಯಿಯನ್ನು ಜೇನು ತುಪ್ಪದಲ್ಲಿ ತೇದು ಇಸವಿಗೆ ಕ್ರಮವಾಗಿ ಹಚ್ಚುತ್ತಾ ಬಂದರೆ ಅನುಕೂಲ ದೊರೆಯುವುದು ಈ ಲೇಪನದಿಂದ ಒಣ ಇಸಬು ಹಸಿ ಇಸಬು ಎರಡು ಗುಣವಾಗುವುದು.
- ಬಾಯಿ ವ್ರಣಕ್ಕೆ : ಅಳಲೇ ಕಾಯಿಯನ್ನು ಜೇನುತುಪ್ಪದೊಡನೆ ಬೆರೆಸಿ ನಾಲಿಗೆ ಮೇಲೆ ವ್ರಣವಿರುವ ಭಾಗಕ್ಕೆ ಸವರಿ.
- ಅಳಲೆಕಾಯಿ ಕಷಾಯವನ್ನು ದಿನಕ್ಕೆ ಮೂರು ಬಾರಿ ಅರ್ಧ ಬಟ್ಟಲಂತೆ ಸೇವಿಸುವುದರಿಂದ ನಾಲಿಗೆ ಸಂಪೂರ್ಣ ಸ್ವಚ್ಛವಾಗುವುದು.
- ಜಠರ ವ್ರಣಕ್ಕೆ ದಿನಕ್ಕೆರಡು ಬಾರಿ ಒಂದು ಚಮಚ ತುಪ್ಪದೊಡನೆ ಅರ್ಧ ಚಮಚಯಷ್ಟು ಜೇನು ಬೆರೆಸಿ ಅದರಲ್ಲಿ ಅಳಲೇಕಾಯಿ ತೇದು ನೆಕ್ಕುತ್ತಾ ಬನ್ನಿ.
- ಜಠರದಲ್ಲಿಯೂ ವ್ರಣ ತ್ವರೆಯಲ್ಲೇ ಮಾಯುವುದು.
- ಅಷ್ಟೆಯಲ್ಲ ಮತ್ತು ಕಲಬಗೆಯ ವ್ಯಾಧೀಗಳನ್ನು ಗುಣಪಡಿಸುವ ಶಕ್ತಿ ಅಳಲೆಕಾಯಿಗುಂಟು
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.


