ಹಾವೇರಿ prajakiran.com : ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಮತ್ತೊಬ್ಬ ಕ್ರಿಯಾಶೀಲ ನಲಿಕಲಿ ಶಿಕ್ಷಕರು ಸೋಮವಾರ ಹಾವೇರಿ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಖರ್ಸಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕರಾದ T. G. ಹೊನ್ನಪ್ಪನವರ ಅವರು ಕೊರೊನಾ ಪಾಸಿಟಿವ್ ನಿಂದ ನಿಧನರಾಗಿದ್ದಾರೆ.
ಈ ಶಿಕ್ಷಕರನ್ನು ಶಿಗ್ಗಾವಿಯ ದೇಸಾಯಿ ಗಲ್ಲಿಯ ಕೋವಿಡ್ 19 ಚೆಕ್ ಪೋಸ್ಟ್ ಗೆ ನಿಯೋಜನೆ ಮಾಡಿದ್ದರು.
ಮೃತ ಶಿಕ್ಷಕರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂತಾಪ ಸೂಚಿಸಿದೆ.
ಈ ಹಿಂದೆ ಕೂಡ ಬೆಂಗಳೂರು, ಗಂಗಾವತಿ ಸೇರಿದಂತೆ ಹಲವಡೆ ಶಿಕ್ಷಕರನ್ನು ಕೋವಿಡ್ ಬಲಿ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.