ಬೆಂಗಳೂರು : ಕೆ ಐ ಎ ಡಿ ಬಿ ಅಧಿಕಾರಿ ಟಿ.ಆರ್. ಸ್ವಾಮಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬಾತ್ ರೂಂನಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
ಬೆಂಗಳೂರಿನ ಬಸವೇಶ್ವರನಗರ ನಿವಾಸದಲ್ಲಿರುವ ಮಂತ್ರಿ ಗ್ರೀನ್ ಅಪಾರ್ಟ ಮೆಂಟ್ ನ 15ನೇ ಮಹಡಿಯಲ್ಲಿ ಸ್ವಾಮಿ ಮನೆ ಹೊಂದಿದ್ದು, ಅವರ ಮನೆಯ ಪಕ್ಕದಲ್ಲಿಯೇ ತಂಗಿಯ ಮನೆ ಕೂಡ ಇದೆ. ದಾಳಿ ವೇಳೆ ಐದನೂರು, ಸಾವಿರ ರೂಪಾಯಿಯ ಹಳೆಯ ನೋಟುಗಳು ಕೂಡ ಪತ್ತೆಯಾಗಿವೆ.
ವಿದೇಶಿ ಕರೆನ್ಸಿ, ಹಾಗೂ ಎರಡು ಸಾವಿರ ಮುಖ ಬೆಲೆಯ ಕೋಟ್ಯಾಂತರ ರೂಪಾಯಿ ನಗದು ದೊರೆತಿದ್ದು, ಅಂದಾಜು ಆರು ಕೋಟಿಗೂ ಅಧಿಕ ನಗದು ಸಿಕ್ಕಿದೆ ಎಂದು ಅಂದಾಜಿಸಲಾಗಿದೆ.
ದಾಳಿಯ ಮಾಹಿತಿ ಅರಿತ ಈ ಸ್ವಾಮಿ 45 ನಿಮಿಷ ಬಾಗಿಲು ತೆಗೆಯದೆ, ಮನೆಯಲ್ಲಿದ್ದ ನಗ, ನಾಣ್ಯ, ಚಿನ್ನವನ್ನು ಸೂಟಕೇಸ್ ನಲ್ಲಿ 15ನೇ ಮಹಡಿಯಿಂದ ಎಸೆದು ಆಟೋದವರಿಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದ. ಆಗ ಅವರು ತೆಗೆದುಕೊಂಡು ಹೋಗುವಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಈ ಟಿ.ಆರ್. ಸ್ವಾಮಿ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವು ಬಾರಿ ವಿದೇಶ ಪ್ರವಾಸ ಮಾಡಿದ್ದ. ಆದರೆ ಟಿ.ಆರ್. ಸ್ವಾಮಿ ಅಪಾರ್ಟ್ ಮೆಂಟ್ ಕಾರ್ಮಿಕರಿಗೆ ಹಣ ನೀಡಲು ಚೌಕಾಸಿ ಮಾಡುತ್ತಿದ್ದ ಎನ್ನಲಾಗಿದ್ದು, ಮನೆಗೆಲಸದವರಿಗೆ ಚಹಾ ಸಹ ಕೊಡುತ್ತಿರಲಿಲ್ಲ. ಇದರಿಂದಾಗಿ ಇಂದು ಎಸಿಬಿ ದಾಳಿಯ ವೇಳೆ ಕಾರ್ಮಿಕರು ಹಿಡಿಶಾಪ ಹಾಕಿದ್ದು ಕಂಡು ಬಂತು.
ಎನ್ ಕಂಜೂಸ್ ಸ್ವಾಮೀ, ಕೋಟಿ ಕೋಟಿ ಹಣವಿದ್ದರೂ ಸ್ವಾಮೀ ಫೂಲ್ ಕಂಜೂಸ ಆಗಿದ್ದ. ಉದ್ಯಾನವನ ಕ್ಲೀನ್ ಮಾಡಲು ಹಣ ಕೊಡುತ್ತಿರಲಿಲ್ಲ. ಅನೇಕರಿಗೆ ಹಣ ನೀಡದೆ ಎಡತಾಕಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.