ಬೆಂಗಳೂರು PRAJAKIRAN.COM : ನೆರೆ ಪರಿಹಾರದಲ್ಲಿಯೂ ರಾಜ್ಯದ ಬಿಜೆಪಿ ಸರಕಾರ ಕೀಳು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಗುಡುಗಿದ್ದಾರೆ.
ಮುಖ್ಯಮಂತ್ರಿ @BSYBJP ಬಿ.ಎಸ್. ಯಡಿಯೂರಪ್ಪ ಅವರ ನಡೆ ಖಂಡನೀಯ ಎಂದು ಕಿಡಿಕಾರಿದ್ದಾರೆ.
ನೆರೆಪೀಡಿತ ಪ್ರದೇಶಗಳ ಪ್ರತಿಯೊಬ್ಬರಿಗೂ ತಾರತಮ್ಯ ಮಾಡದೆ ಪರಿಹಾರ ಕೊಡುವುದು ಸರ್ಕಾರದ ಕರ್ತವ್ಯವಲ್ಲವೆ? ಎಂದು ಪ್ರಶ್ನಿಸಿರುವ ದಿನೇಶ್ ಗುಂಡೂರಾವ್ ತಾವು ಬಿಜೆಪಿಗೆ ಮಾತ್ರ ಮುಖ್ಯಮಂತ್ರಿಯೇ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ @BJP4Karnataka ಬಿಜೆಪಿ ಶಾಸಕರೊಂದಿಗಷ್ಟೆ ನೆರೆ ಪರಿಹಾರ ಸಂಬಂಧ ಸಭೆ ನಡೆಸಿರುವುದು ಪಕ್ಷಪಾತ ಮತ್ತು ಅಪರಾಧ ಎಂದು ಗುಡುಗಿದ್ದಾರೆ.
ಹಾಗಿದ್ದರೆ ನೀವು ಕೇವಲ ಬಿಜೆಪಿ ಮುಖ್ಯಮಂತ್ರಿನಾ ಕರ್ನಾಟಕದ ಮುಖ್ಯಮಂತ್ರಿನಾ ಎಂಬುದು ಕೂಡಲೇ ಸ್ಪಷ್ಟಪಡಿಸಿ,ರಾಜ್ಯದ ಜನತೆಯ ಕ್ಷಮೆಯಾಚಿಸಿಎಂದು ಆಗ್ರಹಿಸಿದ್ದಾರೆ.
ಎಲ್ಲ ಕ್ಷೇತ್ರಗಳ ಜನರಿಗೆ ಪರಿಹಾರ ಕಲ್ಪಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳ ಕಡೆಗಣನೆ ಮಾಡಬೇಡಿ. ಅವರ ಶಾಪ ನಿಮಗೆ ತಟ್ಟದೆ ಇರಲಾರದು ಎಂದು ಕಿಡಿಕಾರಿದರು.