ಹಿರೇಕೆರೂರ PRAJAKIRAN.COM : ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾಜಿ ಸಿಎಂ ಸಿದ್ದರಾಮಯ್ಯ ಚೇಲಾ, ಚಮಚ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಹಿರೇಕೆರೂರ ಅನರ್ಹ ಶಾಸಕ ಬಿ.ಸಿ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಪಿಸಿಸಿ ಇಂತಹ ಅದಕ್ಷ, ದುರ್ಬಲ ಅಧ್ಯಕ್ಷನನ್ನು ಈ ಹಿಂದೆ ಎಂದಿಗೂ ಕಂಡಿರಲಿಲ್ಲ ಎಂದು ಅವರ ವಿರುದ್ದ ಕಿಡಿಕಾರಿದ್ದಾರೆ. ಮಾತನಾಡದೆ ಬಾಯಿಗೆ ಪ್ಲಾಸ್ಟರ್ ಹಾಕಕೊಂಡು ಇರಲು ಸಾಧ್ಯವಿಲ್ಲ.ನಮಗೂ ಮಾತನಾಡಲು ಬರುತ್ತದೆ ಎಂದು ಗುಡುಗಿದರು. ಅವರು ರಾಜ್ಯದಲ್ಲಿ ಕಾಂಗ್ರೆಸ್ […]
Tag: #dinesh gundurao
ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಮತದಾರರು ಬೇಸತ್ತಿದ್ದಾರೆ
ಹುಬ್ಬಳ್ಳಿ PRAJAKIRAN.COM : ಬಿಜೆಪಿ ಹಾಗೂ ಪಕ್ಷಾಂತರಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಅನೈತಿಕ ರಾಜಕಾರಣಕ್ಕೆ ಮತದಾರರು ಬೇಸತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರ ಮಾತಿನಲ್ಲಿ ಆರ್ಭಟವಿದೆ ಹೊರತು ಅಭಿವೃದ್ಧಿ ಕೆಲಸದಲ್ಲಿಲ್ಲ ಎಂದು ಕುಟುಕಿದರು. ಬಿಜೆಪಿಯವರ ಪ್ರತಿಯೊಂದು ಹೆಜ್ಜೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಿದೆ. ಅವರಿಗೆ ಸಂವಿಧಾನ, ಕಾನೂನು, ನೈತಿಕತೆಯಲ್ಲಿ ನಂಬಿಕೆಯಿಲ್ಲ. ಯಾವುದೇ ಮಾರ್ಗವಾಗಲಿ ಅಧಿಕಾರ ಹಿಡಿಯಬೇಕು ಎಂದು ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಹದಿನೈದು ಕ್ಷೇತ್ರಗಳಲ್ಲಿ […]
ಉಪಚುನಾವಣೆ ಬಳಿಕ ಬಿಜೆಪಿ ಸರಕಾರ ಪತನ ಎಂದ ಸಿದ್ದರಾಮಯ್ಯ, ದಿನೇಶ ಗುಂಡುರಾವ್
ಹುಣಸೂರು/ಹೊಸಕೋಟೆ PRAJAKIRAN.COM : ರಾಜ್ಯದಲ್ಲಿ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ನಂತರ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡುರಾವ್ ಭವಿಷ್ಯ ನುಡಿದಿದ್ದಾರೆ. ಅವರು ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹಾಗೂ ಮೈಸೂರಿನ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮಾತನಾಡಿ ಅನರ್ಹ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. ಉಪ ಚುನಾವಣೆಯ ನಂತರ ರಾಜ್ಯದಲ್ಲಿ ರಾಜಕೀಯ […]
ವಿಧಾನಸಭಾ ಅಧ್ಯಕ್ಷರ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್
ರಾಯಚೂರು PRAJAKIRAN.COM : ಅನರ್ಹ ಶಾಸಕರ ವಿಚಾರದಲ್ಲಿ ವಿಧಾನಸಭಾ ಅಧ್ಯಕ್ಷರ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಆದರೆ ಸುಪ್ರೀಂಕೋರ್ಟ್ ಮರು ಸ್ಪರ್ಧೆಗೆ ಅವಕಾಶ ನೀಡಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಕ್ರಮಕ್ಕೆ ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆಗ್ರಹಿಸಿದರು. ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹದಿನೈದು ಶಾಸಕರ ಖರೀದಿ ಮಾಡಿರುವ ಬಿಜೆಪಿ ನಿಜವಾದ ಮುಖವಾಡ ಬಯಲಾಗಿದೆ ಎಂದು ಆರೋಪಿಸಿದರು. ಬಿಜೆಪಿಗೆ ನೈತಿಕತೆಯಿದ್ದರೆ ಹದಿನೈದು ಶಾಸಕರಿಗೆ ಟಿಕೆಟ್ ನೀಡಬಾರದು […]
ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ದಿನೇಶ ಗುಂಡುರಾವ್
ಬೆಂಗಳೂರು PRAJAKIRAN.COM : ವಿಧಾನ ಸಭಾ ಹಾಗೂ ಲೋಕಸಭಾ ಚುನವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅನ್ನು ದುರುಪಯೋಗ ಮಾಡಿಕೊಂಡು ಒಂದು ರಾಷ್ಟ್ರೀಯ ಪಕ್ಷವನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ವಾಗ್ದಾಳಿ ನಡೆಸಿದರು. ಅವರು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೂರು ಸಂಸ್ಥೆಗಳು ಬಿಜೆಪಿ ಸರಕಾರದ ಕೈಗೊಂಬೆಗಳಾಗಿವೆ ಎಂದು ದೂರಿದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಮುಗಿಸಲು ಬಿಜೆಪಿ ನಾಯಕರು […]
ನಾನು ಯಾರ ಚೇಲಾನು ಅಲ್ಲ, ಬಕೇಟ್ ಹಿಡಿದಿಲ್ಲ ಎಂದ ದಿನೇಶ ಗುಂಡೂರಾವ್
ಬೆಂಗಳೂರು PRAJAKIRAN.COM : ನಾನು ಯಾರ ಚೇಲಾನು ಅಲ್ಲ, ಯಾರ ಬಕೇಟೂ ಹಿಡಿದಿಲ್ಲ. ಅಲ್ಲದೆ, ಯಾರ ಮನೆನೂ ಕಾದಿಲ್ಲ. ಪಕ್ಷದ ಕೆಲಸ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾನು ನನ್ನ ಅಭಿಪ್ರಾಯವನ್ನ ಮುಕ್ತವಾಗಿ ಹಂಚಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಶಿಪಾಯಿ ಎಂದು ಹೇಳಿದರು. ನಾನು, ಅನೇಕ ಬಾರಿ ಸಿದ್ದರಾಮಯ್ಯ ನಿಲುವನ್ನು ವಿರೋಧ ಮಾಡಿದ್ದೇನೆ. ನಾನು […]
ಕೆಪಿಸಿಸಿ ಅಧ್ಯಕ್ಷ ಅಯೋಗ್ಯ ನನ್ನ ಮಗ ಎಂದ ಸೋಮಶೇಖರ್
ಬೆಂಗಳೂರು PRAJAKIRAN.COM : ಅವನೆನೂ ಕೆಪಿಸಿಸಿ ಅಧ್ಯಕ್ಷನಾ, ಅಥವಾ ಸಿದ್ದರಾಮಯ್ಯನ ಚೇಲಾನ, ಆ ಅಯೋಗ್ಯ ನನ್ನ್ ಮಗ ಸರಿಯಾಗಿದ್ದರೆ ನಾವು ಕಾಂಗ್ರೆಸ್ ಬಿಡ್ತರಲಿಲ್ಲ ಎಂದು ಯಶವಂತಪುರ ಕಾಂಗ್ರೆಸ್ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ವಿರುದ್ದ ಹರಿಹಾಯ್ದಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾವು ಕಾಂಗ್ರೆಸ್ ಗೆ ಯಾವುದೇ ದ್ರೋಹ ಮಾಡಿಲ್ಲ. ಕಾಂಗ್ರೆಸ್ ಕೂಡ ನಮಗೆ ಅನ್ಯಾಯ ಮಾಡಿಲ್ಲ. ನಾವು ಕೇವಲ ಸಮ್ಮೀಶ್ರ ಸರಕಾರ ಸರಿಯಿಲ್ಲ ಎಂದು ನಮ್ಮ ಶಾಸಕ ಸ್ಥಾನಕ್ಕೆ […]
ನೆರೆ ಪರಿಹಾರದಲ್ಲಿಯೂ ಕೀಳು ರಾಜಕಾರಣ ಮಾಡುತ್ತಿರುವ ಬಿಜೆಪಿ
ಬೆಂಗಳೂರು PRAJAKIRAN.COM : ನೆರೆ ಪರಿಹಾರದಲ್ಲಿಯೂ ರಾಜ್ಯದ ಬಿಜೆಪಿ ಸರಕಾರ ಕೀಳು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಗುಡುಗಿದ್ದಾರೆ. ಮುಖ್ಯಮಂತ್ರಿ @BSYBJP ಬಿ.ಎಸ್. ಯಡಿಯೂರಪ್ಪ ಅವರ ನಡೆ ಖಂಡನೀಯ ಎಂದು ಕಿಡಿಕಾರಿದ್ದಾರೆ. ನೆರೆಪೀಡಿತ ಪ್ರದೇಶಗಳ ಪ್ರತಿಯೊಬ್ಬರಿಗೂ ತಾರತಮ್ಯ ಮಾಡದೆ ಪರಿಹಾರ ಕೊಡುವುದು ಸರ್ಕಾರದ ಕರ್ತವ್ಯವಲ್ಲವೆ? ಎಂದು ಪ್ರಶ್ನಿಸಿರುವ ದಿನೇಶ್ ಗುಂಡೂರಾವ್ ತಾವು ಬಿಜೆಪಿಗೆ ಮಾತ್ರ ಮುಖ್ಯಮಂತ್ರಿಯೇ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಕೇವಲ @BJP4Karnataka ಬಿಜೆಪಿ ಶಾಸಕರೊಂದಿಗಷ್ಟೆ ನೆರೆ ಪರಿಹಾರ ಸಂಬಂಧ ಸಭೆ […]