ರಾಜ್ಯ

ಮಹಿಳೆ ಲೈಂಗಿಕ ವಿಡಿಯೋ : ಹೆದರಿಸಿ 8 ಲಕ್ಷ ಪೀಕಿದ ದಂಪತಿ ಅಂದರ್ !

ಬೆಂಗಳೂರು : ಮಹಿಳೆಯೊಬ್ಬಳಿಗೆ ಲೈಂಗಿಕ ವಿಡಿಯೋ ಇದೆ ಎಂದು ಹೆದರಿಸಿ ಆಕೆಯಿಂದ 8 ಲಕ್ಷ ರೂಪಾಯಿ ಪೀಕಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ದುರಂತದ ಸಂಗತಿಯೆಂದರೆ ಹೆಂಡತಿಯೂ ಗಂಡನ ಜೊತೆಗೆ ಸೇರಿ ಆಕೆಯನ್ನು ಹೆದರಿಸುತ್ತಿದ್ದಳು. ಗಂಡ ಕ್ಯಾನ್ಸರ್ ನಿಂದ ಬಳಲುತ್ತಿದ್ದನ್ನು ಬಂಡವಾಳ ಮಾಡಿಕೊಂಡ ಖದೀಮ ಇಮ್ರಾನ್ ಖಾನ್ ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡುದಲ್ಲದೆ, ವಿಡೀಯೋ ಮಾಡಿ ಹಣ ನೀಡುವಂತೆ ಸದಾ ಪೀಡಿಸುತ್ತಿದ್ದ

ಆತನಿಗೆ ಹೆಂಡತಿ ಸೀಮಾ ಖಾನ್ ಕೂಡ ಸಹಕಾರ ನೀಡುತ್ತಿದ್ದಳು. ಇದರಿಂದ ಬೇಸತ್ತು ನೊಂದ ಸಂತ್ರಸ್ತ್ರೆ, ಈ ಕುರಿತು ಶಿವಾಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಶಿವಾಜಿ ನಗರ ಪೊಲೀಸರು ಗಂಡ ಇಮ್ರಾನ್ ಖಾನ್ ಹಾಗೂ ಹೆಂಡತಿ ಸೀಮಾ ಖಾನ್ ನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಇನ್ನೂ ಈ ಸೀಮಾ ಖಾನ್ ತಾನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಎಂದು ಹೇಳಿಕೊಂಡು ಅಲೆದಾಡುತ್ತಿದ್ದಳು. ಹೀಗೆ ಹಲವರಿಗೆ ವಂಚಿಸಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *