ರಾಜ್ಯ

ಬೇಳೂರು ಗೋಪಲಕೃಷ್ಣ ಪತ್ನಿ ಸಮೇತ ಸಿಗಂಧೂರು ಸನ್ನಿಧಿಗೆ ಬರಲು ಸವಾಲ್ !

ಸಾಗರ : ಸಾಗರ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕಾಂಗ್ರೆಸ್ ನ ಮಾಜಿ ಶಾಸಕ ಬೇಳೂರು ಗೋಪಲಕೃಷ್ಣ ಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಅವರಿಗೆ ತಾಕತ್ ಇದ್ದರೆ ಪತ್ನಿ ಸಮೇತ ಸಿಗಂಧೂರು ಸನ್ನಿಧಿಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.

ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಕದನ ಮುಗಿದರೂ ಇವರಿಬ್ಬರ ವಾಕ್ಸಮರ, ವಾಗ್ದಾಳಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಈ ಹಿಂದೆ ಬೇಳೂರು ಗೋಪಾಲ್ ಕೃಷ್ಣ ಅವರು ಲೈಂಗಿಕ ಹಗರಣ ಕುರಿತಂತೆ ಪತ್ನಿ ಸಮೇತ ಬಂದು ಪ್ರಮಾಣ ಮಾಡಲಿ ಎಂದು ಹರತಾಳು ಹಾಲಪ್ಪ ಗೆ ಸವಾಲ್ ಹಾಕಿದ್ದರು.
ಅದಕ್ಕೆ ಪ್ರತಿಯಾಗಿ ತಿರುಗೇಟು ನಿಡಿದ ಹರತಾಳು ಹಾಲಪ್ಪ, ಸಿಗಂಧೂರು ದೇವಿ ಸನ್ನಿಧಿಗೆ ಬಂದು ಪತ್ನಿ ಸಮೇತ ಬಂದು ಪ್ರಮಾಣ ಮಾಡಲಿ, ಅನೈತಿಕ ಸಂಬಂಧದದಲ್ಲಿ ಸಿಲುಕಿಸಲು ಸಂಚು ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸುತ್ತೇನೆ.ಅಲ್ಲದೆ, ಅವರ ಅನೈತಿಕ ಸಂಬಂಧದ ಪಟ್ಟಿ ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಈಗಾಗಲೇ ನನಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಜನತಾ ನ್ಯಾಯಾಲಯದಲ್ಲಿ ಕೂಡ ಜಯ ಸಿಕ್ಕಿದೆ. ಮಹಿಳೆ ಜೊತೆಗೆ ಸಂಬಂಧ ಇಲ್ಲ ಎಂಬುದು ರುಜುವಾತಾಗಿದೆ ಎಂದು ಸಮರ್ಥಿಸಿಕೊಂಡರು.

ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಗೋಪಾಲ್ ಕೃಷ್ಣ ಬೇಳೂರು ಅವರ ವೈಯಕ್ತಿಕ ವಾಗ್ದಾಳಿ ಮಾತ್ರ ಮುಗಿದಿಲ್ಲ. ಇಬ್ಬರು ಪರಸ್ಪರ ಪತ್ನಿ ಸಮೇತ ಬಂದು ಆಣೆ ಪ್ರಮಾಣ ಮಾಡಲಿ ಎಂಬುದು ಮುಂದುವರೆದಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *