ಅಮೃತ ಬಳ್ಳಿ ಕಷಾಯವನ್ನು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತ ಶುದ್ದಿಯಾಗುತ್ತದೆ.
ಹಸುವಿನ ಹಾಲಿಗೆ ಅರಶಿಣ ಹಾಕಿ ಚೆನ್ನಾಗಿ ಕುದಿಸಬೇಕು. ರಾತ್ರಿ ಮಲಗುವಾಗ ಈ ಹಾಲನ್ನು ಸೇವಿಸಿ ಮಲಗಬೇಕು. ಇದರಿಂದ ರಕ್ತ ಶುದ್ಧಿಯಾಗುತ್ತದೆ.
ಜೇಷ್ಠ ಮಧುವಿಗೆ ನೀರನ್ನು ಬೆರೆಸಿ ಕಷಾಯ ಮಾಡಿ ಸೇವಿಸಿದರೆ ಪಿತ್ತ ಶಮನವಾಗಿ ರಕ್ತ ಶುದ್ಧಿಯಾಗುತ್ತದೆ.
ಹತ್ತು ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೇವಿಸಿದರೆ ರಕ್ತ ಶುದ್ಧಿಗೆ ರಾಮಬಾಣ.
ಅಡುಗೆಯಲ್ಲಿ ಹೆಚ್ಚು ಹೆಚ್ಚು ಕರಿಬೇವಿನ ಎಲೆಗಳನ್ನು ಉಪಯೋಗಿಸುವುದರಿಂದ ರಕ್ತ ಶುದ್ಧಿಯಾಗುವುದು.
ದಿನಾಲು ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು.
ನೇರಳೆ ಹಣ್ಣು ಹೆಚ್ಚಾಗಿ ಸೇವಿಸುವುದರಿಂದ ಕೂಡ ರಕ್ತ ಶುದ್ಧಿಯಾಗುತ್ತದೆ.
ನುಗ್ಗೆ ಸೋಪ್ಪನ್ನು ಚೆನ್ನಾಗಿ ಬೇಯಿಸಿ ಹಾಲು ಸಕ್ಕರೆ ಬೆರೆಸಿ ಕುಡಿಯುವುದರಿಂದ ರಕ್ತಶುದ್ಧಿಯಾಗುತ್ತದೆ.
ಮೂರು ಬಿಲ್ವಪತ್ರೆ ಏಲೆಯನ್ನು ಮೂರು ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿ ನೀರು ಕುಡಿಯಬೇಕು. ಮೂರು ಗಂಟೆ ಏನನ್ನು ಸೇವಿಸಬಾರದು. ನೀರು ಜಾಸ್ತಿ ಸೇವನೆ ಮಾಡುವುದರಿಂದ ಕೂಡ ರಕ್ತ ಶುದ್ಧಿಯಾಗುತ್ತದೆ.
ಆಣಿಯಿದ್ದ ಭಾಗದಲ್ಲಿ ಕೊಳಕು ಇತ್ಯಾದಿಗಳನ್ನು ತೊಳೆದು ಒರೆಸಿ ನಂತರ ಒಣಗಿಸಿದ ಗೇರು ಬೀಜದ ಹೊರಸಿಪ್ಪೆಯನ್ನು ಕಾಯಿಸಿ ಬಿಸಿ ಎಣ್ಣೆಯನ್ನು ಆಣಿಯಿದ್ದಲ್ಲಿ ಹಾಕುವುದರಿಂದ ಒಂದೆ ಭಾರಿಗೆ ಆಣಿ ಮಾಯವಾಗುವುದು. ಹುಣಸೆ ಎಲೆಗಳ ರಸಕ್ಕೆ ಸ್ವಲ್ಪ ರಕ್ತವಾಳ ಸಾಸಿವೆ ಅಗ್ರದ ಕಾಯಿ ಇವುಗಳನ್ನು ಹಾಕಿ ಬೇಯಿಸಿ ಅರೆದು ಪದೇ ಪದೇ ಆರಿದಂತೆ ಲೇಪಿಸಬೇಕು. ತೆಂಗಿನ ಎಣ್ಣೆಯನ್ನು ಕಾಯಿಸಿ ಬಿಸಿಯಾಗಿರುವಾಗಲೇ ಆಣಿ ಇದ್ದಲ್ಲಿ ಹಾಕುವುದು. ಒಂದು ದಿನ ಹಾಕಿದರೆ ಗುಣವಾಗುತ್ತದೆ. ಓಮದ ಚೂರ್ಣದೊಡನೆ ಸಮಾಂಶ ಸಕ್ಕರೆ ಸೇರಿಸಿ 20ರಿಂದ 30 ದಿವಸ […]
50 ಮಿಲಿ ಲೀಟರ್ ಮೂಲಂಗಿ ರಸದಲ್ಲಿ 75 ಮಿಲಿ ಲೀಟರ್ ಕಬ್ಬಿನ ರಸ ಸೇರಿಸಿ ಸೇವಿಸಬೇಕು. ಈ ಉಪಚಾರವನ್ನು ಮಧ್ಯಾಹ್ನದ ಭೋಜನದ ನಂತರ ನಿತ್ಯ ನಿಯಮಿತವಾಗಿ ಮಾಡಿದರೆ ಹಿತವಾಗುತ್ತದೆ. ಗಂಟಲನ್ನು ಒದ್ದೆಯಾಗಿಸಲು ಲವಂಗವನ್ನು ಬಾಯಲ್ಲಿರಿಸಿಕೊಂಡು ರಸ ಹೀರುತ್ತಿರಬೇಕು. ಸಾಧಾರಣ ಕೆಮ್ಮಿದ್ದರೆ ಒಂದು ಚಮಚ ಜೇನು ತುಪ್ಪದಲ್ಲಿ ಒಂದು ಚಮಚ ಹಸಿ ಶುಂಠಿ ರಸ ಸೇರಿಸಿ ಸೇವಿಸಬೇಕು. ಕಷಯುಕ್ತ ಕೆಮ್ಮಿದ್ದರೆ ಸ್ವಲ್ಪ ಒಣಗಿಸಿದ ತುಳಸಿ ಎಲೆಯ ಚೂರ್ಣದಲ್ಲಿ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಬಾಯಿಗೆ ಹಾಕಿಕೊಂಡು ಮೇಲೆ ಒಂದೆರಡು ಗುಟುಕು […]
ತಲೆ ನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದರೆ ತಲೆ ನೋವು ನಿವಾರಣೆಯಾಗುತ್ತದೆ. ಬೆಲ್ಲದ ಚೂರು ಬಾಯಿಯಲ್ಲಿ ಹಾಕಿಕೊಂಡು ಲಾಲಾರಸ ಉತ್ಪತ್ತಿಯಾಗುವಂತೆ ಮಾಡಿದರೆ ಉಸಿರಾಟದ ತೊಂದರೆ ದೂರವಾಗುತ್ತದೆ. ಗಂಟಲು ಕೆರತ ಹಾಗೂ ಕೆಮ್ಮು ಕಾಣಿಸಿದರೆ ಈರುಳ್ಳಿ ಇಲ್ಲವೇ ಬೆಳ್ಳೂಳ್ಳಿಯನ್ನು ಸುಟ್ಟು ಬೆಲ್ಲದೊಂದಿಗೆ ಸವಿದರೆ ಸಾಕು ಕ್ಷಣಾರ್ಧದಲ್ಲಿ ಗಂಟಲು ಕೆರತ ಹಾಗೂ ಕೆಮ್ಮು ಹೋಗುತ್ತದೆ. ದಿನನಿತ್ಯ ನಿಯಮಿತ ಬೆಲ್ಲ ಸೇವನೆಯಿಂದ ರಕ್ತ ಕೂಡ ಶುದ್ದೀಕರಣಗೊಳ್ಳುತ್ತದೆ. ಬೆಲ್ಲ ಸೇವನೆಯೂ ಅಜೀರ್ಣ ನಿವಾರಣೆ ಮಾಡಿ ಜೀರ್ಣ ಕ್ರಿಯೆಗೆ ಕೂಡ ಸಹಕಾರಿಯಾಗಿದೆ. ಬೆಲ್ಲವೂ […]