ಧಾರವಾಡ : ರಸ್ತೆ ಮೇಲೆ ನಿಲ್ಲಿಸಿದ ಕಾರ ಕದ್ದು ಒಯ್ಯುತ್ತಿದ್ದ ವ್ಯಕ್ತಿಯನ್ನು ಪೋಲಿಸ ವಶಕ್ಕೆ ಪಡೆದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಟಿವಿ ಟಾವರ್ ಬಳಿ ನಿಲ್ಲಿಸಿದ್ದ ಕಾರ ಕದ್ದು ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಗಮನಿಸಿದ್ದಾರೆ. ಅವನ ಚಲನ ವಲನ ಕಂಡು ಅನುಮಾನಗೊಂಡಿದ್ದಾರೆ.
ರಸ್ತೆ ಬದಿಯಲ್ಲಿ ನಿಲ್ಲಿಸಿ ಮೆಡಿಕಲ್ ಶಾಪ್ ಗೆ ಹೋಗಿ ಬರುವದರಲ್ಲೆ ಕಾರ್ ಕದ್ದು ಒಯ್ಯಲು ಹೋಗಿ ಸಿಕ್ಕಿ ಬಿದ್ದಿದ್ದಾನೆ..
ಬೆಂಗಳೂರು ಮೂಲದ ರಮೇಶ ಎಂಬಾತ ಕಾರ ಕಳ್ಳನಾಗಿದ್ದಾನೆ. ಎರಡು ಕಿಲೊಮಿಟರ್ ಕಾರು ತಗೆದುಕೊಂಡು ಹೋಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರ ಕಳ್ಳ.
ಕಾರ್ ಮಾಲೀಕರು ಗಾಬರಿಗೊಂಡು ಆ ಕಾರ್ ಹಿಂದೆಯಿಂದ ಫಾಲೊ ಮಾಡಿ ಕಾರ ಕಳ್ಳನ ಹಿಡಿದಿದ್ದಾರೆ.
ಕೆ ಎ ೨೫ ಎನ್ : ೭೭೧೭ ಸಂಖ್ಯೆಯ ಕಾರ ಕದ್ದಿದ್ದ ಕಳ್ಳ. ಕಾರ್ ಸಮೇತ ಕಳ್ಳನ್ನು ಪೋಲಿಸ್ ಠಾಣೆಗೆ ಕರೆ ತಂದ ಕಾರ್ ಮಾಲೀಕರು ಆತನನ್ನು ಉಪನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಆನಂತರ ಪ್ರಕರಣ ದಾಖಲಿಸಿಕೊಂಡ ಉಪನಗರ ಪೋಲಿಸ್ ಠಾಣೆಯ ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.