ರಾಜ್ಯ

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಥಾನದ ಅವಿಶ್ವಾಸ ನಿರ್ಣಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಥಾನದ ಅವಿಶ್ವಾಸ ನಿರ್ಣಯಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರು ಸಜ್ಜಾಗಿದ್ದಾರೆ.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ವಿರುದ್ದ ಅವಿಶ್ವಾಸಕ್ಕೆ ಸದಸ್ಯರು. ಸಜ್ಜಾಗಿದ್ದು, ಈ ಹಿನ್ನಲ್ಲೆಯಲ್ಲಿ ಜಿ.ಪಂ ಸದಸ್ಯರು ಸಿಇಓ ಭೇಟಿಯಾಗಿ ಅವಿಶ್ವಾಸ ನಿರ್ಣಯಕ್ಕೆ ಸಭೆ ಕರೆಯಲು ಮನವಿ ಸಲ್ಲಿಸಿದ್ದಾರೆ.

ಸಿಇಓ ಪಿ.ಎನ್.ರವೀಂದ್ರ ಅವರನ್ನ ಭೇಡಿ ಮಾಡಿ ಮನವಿ ನೀಡಿರುವ ಸದಸ್ಯರು 30 ತಿಂಗಳ ಒಪ್ಪಂದದ ಪ್ರಕಾರ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಅವಿಶ್ವಾಸಗೊತ್ತುವಳಿಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸುಮಾರು 30 ಕ್ಕೂ ಹೆಚ್ಚು ಕಾಂಗ್ರೇಸ್ ಸದಸ್ಯರು ಸಹಿ ಮಾಡಿದ ಪತ್ರ ಸಿಇಓಗೆ ನೀಡಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೋರಿದ್ದಾರೆ.

ಹೀಗಾಗಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಾದಿಗೆ ದುರ್ಗದ ‘ಕೈ’ಮನೆಯಲ್ಲಿ ಪೈಟ್ ಆರಂಭಗೊಂಡಾಗಿದೆ.

ಜಿಪಂ ಅಧ್ಯಕ್ಷ ಸೌಭಾಗ್ಯ ಬಸವರಾಜನ್ ಈಗಲಾದರೂ ರಾಜೀನಾಮೆ ನೀಡುತ್ತಾರಾ ಅಥವಾ ಸದಸ್ಯರೇ ಅವರನ್ನು ಕೆಳಗಿಸುತ್ತಾರಾ ತೀವ್ರ ಕೂತುಹಲ ಕೆರಳಿಸಿದೆ.

Please follow and like us:

Leave a Reply

Your email address will not be published. Required fields are marked *