ಹುಬ್ಬಳ್ಳಿ : ಅವಳಿನಗರದಲ್ಲಿ ಸರಗಳ್ಳರ ಹಾವಳಿ ವಿಪರೀತವಾಗಿದ್ದು, ಮಾಂಗಲ್ಯ ಸರ ದೋಚುವ ಖದೀಮರ ದೊಡ್ಡ ಗ್ಯಾಂಗ್ ಬೀಡು ಬಿಟ್ಟಂತೆ ಕಾಣುತ್ತಿದೆ.
ದಿನ ನಿತ್ಯ ಒಂದಿಲ್ಲ ಒಂದು ಕಡೆ ಮಹಿಳೆಯರ ಕೊರಳಿಗೆ ಕೈ ಹಾಕುವ ಕಳ್ಳರ ಗ್ಯಾಂಗ್ ಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲವಾಗಿದ್ದರಿಂದ ಮಹಿಳೆಯರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಇದಕ್ಕೆ ಇದೀಗ ಹಳೇಹುಬ್ಬಳ್ಳಿಪೊಲೀಸ್‌ಠಾಣೆ ನಡೆದ ಪ್ರಕರಣವೇ ಸಾಕ್ಷಿಯಾಗಿದೆ. ಮಮತಾ ಕೋಂ ವಿರೇಶ ಹೆಡಿಯಾಲಮಠ ಅವರು ಸಂಜೆ ೪-೧೫ ಗಂಟೆ ಸುಮಾರಿಗೆ ಮಮತಾ ಹಾಗೂ ತಮ್ಮ ಮಗಳು ಜೊತೆಗೆ ಸರಸ್ವತಿ ವಿದ್ಯಾಮಂದಿರಕ್ಕೆ ಹೋಗುತ್ತಿರುವಾಗ ಸರಗಳ್ಳತನ ನಡೆದಿದೆ.
ಹಳೇಹುಬ್ಬಳ್ಳಿ ವಾಸವಿ ನಗರದ, ವಾಸವಿ ಮಹಲ್ ಹತ್ತಿರ ಆಟೋ ಇಳಿದು ಆಟೋ ರಿಕ್ಷಾ ಬಾಡಿಗೆ ಕೊಡುತ್ತಿರುವಾಗ ಎರಡು ಜನ ಅಪರಿಚಿತರು ಮೋಟಾರ್ ಸೈಕಲ್‌ದಲ್ಲಿ ಬಂದು,ಒಮ್ಮೇಲೆ ಇವರ ಕೊರಳಿಗೆ ಕೈಹಾಕಿ ಅವರ ಕೊರಳಲ್ಲಿದ್ದ ೩೫ ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದರಿಂದ ಮಹಿಳೆ ದಿಕ್ಕು ತೋಚದೆ ಕಂಗಲಾಗಿ ಹೋಗಿದ್ದಾರೆ. ಈ ಬಗ್ಗೆ ಮಮತಾ ಕೋಂ ವಿರೇಶ ಹೆಡಿಯಾಲಮಠ ನೀಡಿದ ದೂರಿನ ಮೇರೆಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.