ಅಪರಾಧ

ಸಹಾಯ ಮಾಡಲು ಬಂದವನ ಪರ್ಸ್ ಕಿತ್ತುಕೊಂಡು ಪರಾರಿಯಾದ ಚೋರ

ಧಾರವಾಡ : ಅಸಹಾಯಕ ವ್ಯಕ್ತಿಯ ಸಹಾಯ ಮಾಡಲು ಹೋದ ವ್ಯಕ್ತಿಯೊಬ್ಬ ಚೋರ ಚಿತ್ತನ ಕೈಯಲ್ಲಿ ಸಿಲುಕಿಕೊಂಡು ತನ್ನ ಪರ್ಸ್ ಕಳೆದುಕೊಂಡ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.

ಭದ್ರಾವತಿಯ ಬೋವಿಗಲ್ಲಿ ನಿವಾಸಿಯಾದ ಅಜಯ ತಂದೆ ನಾಗರಾಜ ಬೋವಿ ಬೆಳಗಿನ ೯ ಗಂಟೆ ಸುಮಾರಿಗೆ ಧಾರವಾಡ ಗಾಂಧಿ ಚೌಕ ಬಳಿಯಿರುವ ಉಮಾ ಜ್ಯುವೆಲ್ಸ್ ಅಂಗಡಿಯ ಮುಂದೆ ಬಂದು ಅಲ್ಲಿದ್ದ ಅಜ್ಮತ್‌ ಅಬ್ಜಲ್‌ ಖಾನ ಪಠಾಣ ಮಣಿಕಿಲ್ಲಾ ಧಾರವಾಡ ಇವರನ್ನು ಮಾತನಾಡಿಸಿದ್ದಾನೆ.

ನಾನು ಭದ್ರಾವತಿಯಿಂದ ಬಂದಿದ್ದು, ಹಣವನ್ನು ಕಳೆದುಕೊಂಡಿರುತ್ತೆನೆ. ಚಹಾ ಕುಡಿಯಲು ಹಣ ಕೊಡಿರಿ ಅಂತಾ ಅಜಯ ಬೋವಿ ಕೇಳಿದಾಗ, ಅಜ್ಮತ್‌ ಇವರು ತಮ್ಮ ಕಿಸೆಯಲ್ಲಿ ೧೩೭೦/- ರೂ ಹಣವಿದ್ದ ಪರ್ಸನ್ನು ತೆಗೆದು ಹಣ ಕೊಡುತ್ತಿರುವಾಗ ಅವರ ಕೈಯಲ್ಲಿದ್ದ ಪರ್ಸನ್ನು ಕಿತ್ತುಕೊಂಡು ಹೋಗಿದ್ದಾನೆ.

ಈ ಬಗ್ಗೆ ಅಜ್ಮತ್‌ ಅಬ್ಜಲ್‌ಖಾನ ಪಠಾಣ ನೀಡಿದ ದೂರಿನ ಮೇರೆಗೆ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೋರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *