ರಾಜ್ಯ

ರೆಸಾರ್ಟ್ ನತ್ತ ಮುಖ ಮಾಡಿದ ಕಾಂಗ್ರೆಸ್-ಜೆಡಿಎಸ್ ಶಾಸಕರು

ಬೆಂಗಳೂರು : ಬಿಜೆಪಿ ನಾಯಕರು ರಾಜ್ಯದ ಸಮ್ಮೀಶ್ರ ಸರಕಾರದ ಬುಡಕ್ಕೆ ಕೈ ಹಾಕಿದ ಬಳಿಕ ಕೊನೆಗೂ ಏಚ್ಚೆತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮ ಎಲ್ಲ ಶಾಸಕರನ್ನು ಬೆಂಗಳೂರಿಗೆ ಬರಲು ಸೂಚಿಸಿದೆ.

ಈಗಾಗಲೇ ರಾಮನಗರದ ಬಿಡದಿ ಹೊರವಲಯದ ಬಳಿಯಿರುವ ಈಗಲ್ ಟನ್ ರೆಸಾರ್ಟ್ ಬುಕಿಂಗ್ ಮಾಡಿದ್ದು, ಎಲ್ಲ ಶಾಸಕರನ್ನು ಇದೇ ರೆಸಾರ್ಟ್ ನಲ್ಲಿ ಇಳಿಸಲು ನಿರ್ಧರಿಸಿದೆ.

ಬಿಜೆಪಿ ಶಾಸಕರು ಆಪರೇಶನ್ ಕಮಲಕ್ಕೆ ಕೈ ಹಾಕಿದ ಬಳಿಕ ಏನು ಆಗಿಲ್ಲ. ನಮ್ಮ ಸರಕಾರ ಸುಭದ್ರ ಎನ್ನುತ್ತಲೇ ಕುಳಿತಿದ್ದ ಉಭಯ ಪಕ್ಷದ ನಾಯಕರು, ಇಬ್ಬರು ಪಕ್ಷೇತರ ಶಾಸಕರು ಸಮ್ಮೀಶ್ರ ಸರಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ವಾಪಾಸ್ ಪಡೆದ ಬಳಿಕ ಏಚ್ಚೆತ್ತುಕೊಂಡಿದ್ದಾರೆ.

ಈಗಲೂ ನಮ್ಮ ಸರಕಾರ ಸುಭದ್ರ ಎನ್ನುತ್ತಲೇ ಬಿಜೆಪಿ ನಾಯಕರ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ರೆಸಾರ್ಟ್ ರಾಜಕಾರಣ ಆರಂಭಿಸಿದ್ದು, ತಮ್ಮ ಸಂಖ್ಯಾಬಲ ಖಾತ್ರಿಗೊಳಿಸಿಕೊಳ್ಳುವ ಜೊತೆಗೆ ಅವರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.

ಎಲ್ಲ ಶಾಸಕರು ರೆಸಾರ್ಟ್ ಗೆ ಆಗಮಿಸಿದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮುಂದಿನ ರಾಜಕೀಯ ತಂತ್ರಗಾರಿಕೆ ಅನುಸರಿಸಲಾಗುವುದು ಎಂದು ತಿಳಿದುಬಂದಿದೆ.

ಹೀಗಾಗಿ ಹೈಕಮಾಂಡ್ ಬುಲಾವ್ ಮೇರೆಗೆ ಉಭಯ ಪಕ್ಷಗಳ ಎಲ್ಲ ಶಾಸಕರು ಇದೀಗ ಬೆಂಗಳೂರಿನ ಈಗಲ್ ಟನ್ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ.

ಈ ಸಭೆಯಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳುತ್ತಾರೆ. ಎಷ್ಟು ಶಾಸಕರು ಕೈ ಕೊಡ್ತಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ನಡೆ ಅವಲಂಬಿಸಿದೆ.

Please follow and like us:

Leave a Reply

Your email address will not be published. Required fields are marked *