ಬೆಂಗಳೂರು : ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮೀಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರರ ಶಾಸಕರು ವಾಪಾಸ್ ಪಡೆದಿದ್ದಾರೆ.
ಅದರಲ್ಲೂ ಈವರೆಗೆ ಸಮ್ಮೀಶ್ರ ಸರಕಾರದಲ್ಲಿ ಪಾಲುದಾರರಾಗಿದ್ದ ಪಕ್ಷೇತರ ಶಾಸಕರು ದಿಢೀರ್ ಆಗಿ ತಮ್ಮ ಬೆಂಬಲ ನೀಡಿರುವುದನ್ನು ವಾಪಾಸ್ ಪಡೆದಿರುವುದು ರಾಜ್ಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.
ಮಾಜಿ ಅರಣ್ಯ ಸಚಿವ ಹಾಗೂ ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್ ಹಾಗೂ ಮುಳಬಾಗಿಲು ಶಾಸಕ ಆರ್. ನಾಗೇಶ ಈ ಕುರಿತು ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ಪತ್ರವನ್ನು ಬರೆದಿದ್ದು, ತಮ್ಮ ಬೆಂಬಲವನ್ನು ವಾಪಾಸ್ಸು ಪಡೆದಿರುವುದಾಗಿ ಮುಂಬಯಿನಲ್ಲಿ ಘೋಷಿಸಿದ್ದಾರೆ.
ಅವರು ತಮ್ಮ ಬೆಂಬಲ ವಾಪಾಸ್ಸು ಪಡೆಯುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಉಂಟಾಗಿದ್ದು, ಪಕ್ಷೇತರ ಶಾಸಕರ ಬೆಂಬಲ ವಾಪಾಸ್ಸು ಪಡೆಯುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್ ನಾಯಕರು ಬಿಜೆಪಿಯ ಆಪರೇಶನ್ ಕಮಲದ ವಿರುದ್ದ ಮುಗಿಬಿದ್ದಿದ್ದಾರೆ. ಸಮ್ಮೀಶ್ರ ಸರಕಾರದ ಪತನಕ್ಕೆ ಮುನ್ನುಡಿ ಆರಂಭವಾಗಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣ ಹೊರಬರಬೇಕಿದೆ.