ರಾಜ್ಯ

ನಿಷೇಧಾಜ್ಞೆ ನಡುವೆ ಮಂಗಳೂರಿಗೆ ಬಂದ ಕಾಂಗ್ರೆಸ್ ನಾಯಕರ ಬಂಧನ

ಮಂಗಳೂರು PRAJAKIRAN.COM : ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಕಾವು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಕರ್ಪ್ಯೂ ಜಾರಿಯಲ್ಲಿದ್ದರೂ ಮಂಗಳೂರಿಗೆ ಬಂದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂಧಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದಿಳಿದ ಕಾಂಗ್ರೆಸ್ ನಾಯಕರ ನಿಯೋಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ,

ಮಾಜಿ ಸ್ಪೀಕರ್ ರಮೇಶಕುಮಾರ್, ಮಾಜಿ ಸಚಿವರಾದ ಎಂ.ಬಿ. ಪಾಟೀಲ, ಬಸವರಾಜ ರಾಯರಡ್ಡಿ, ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ತೆಗೆದುಕೊಂಡರು.

ಮಂಗಳೂರಿನಲ್ಲಿ ಗೋಲಿಬಾರ್ ನಡೆದ ಹಿನ್ನಲೆಯಲ್ಲಿ ತೋಸಿಫ್ ಹಾಗೂ ಜಮೀಲ್ ಮೃತಪಟ್ಟಿದ್ದರು. ಹೀಗಾಗಿ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಲು ನಿರ್ಧರಿಸಿದ್ದರು.

ಆದರೆ ಪೊಲೀಸರು ಅವರನ್ನು ಮಂಗಳೂರು ನಗರ ಪ್ರವೇಶಕ್ಕೆ ನಿರಾಕರಿಸಿದರು. ಅಲ್ಲದೆ, ಶಾಂತಿಭಂಗ ಆಗಬಹುದು ಎನ್ನುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಅವರನ್ನು ಬಂಧಿಸಿದರು.

ಇದರಿಂದ ರೊಚ್ಚಿಗೆದ್ದ ಮಾಜಿ ಸ್ಪೀಕರ್ ರಮೇಶಕುಮಾರ್, ವಿ.ಎಸ್. ಉಗ್ರಪ್ಪ, ರಾಜ್ಯ ಸರಕಾರದ ವಿರುದ್ದ ಕಿಡಿ ಕಾರಿದರು.

ಅಲ್ಲದೆ, ಸರ್ವಾಧಿಕಾರಿ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದು ರಾಜ್ಯದಲ್ಲಿ ಅನಧಿಕೃತ ತುರ್ತು ಪರಿಸ್ಥೀತಿ ಘೋಷಣೆ ಯಾದಂತೆ ತೋರಿಸುತ್ತಿದೆ ಎಂದು ಆರೋಪಿಸಿದರು.

Please follow and like us:

One Reply to “ನಿಷೇಧಾಜ್ಞೆ ನಡುವೆ ಮಂಗಳೂರಿಗೆ ಬಂದ ಕಾಂಗ್ರೆಸ್ ನಾಯಕರ ಬಂಧನ”

Leave a Reply

Your email address will not be published. Required fields are marked *