ಉತ್ತರಪ್ರದೇಶ PRAJAKIRAN.COM : ಪೌರತ್ವ ಕಾಯ್ದೆ ವಿರೋಧಿ ಹೋರಾಟ ಉತ್ತರ ಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದೆ. ಇದರಿಂದಾಗಿ ಉತ್ತರ ಪ್ರದೇಶದ 5 ಜಿಲ್ಲೆಗಳಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದೆ.
ಈವರೆಗೆ 15 ವಾಹನಗಳಿಗೆ ಬೆಂಕಿಬಿದ್ದಿದ್ದು, ಎಲ್ಲಡೆ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಇದೇ ವೇಳೆ ಕಾನ್ಪೂರ್ ದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಪರಸ್ಪರ ಕಲ್ಲು ತೋರಾಟ ನಡೆದಿದೆ. ಬುಲಂದ್ ಶಹರದಲ್ಲಿ ಪೊಲೀಸ್ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಅದೇ ರೀತಿ ಗೋರಕ್ ಪುರ, ಮಿರತ್ ಗಾಜಿಯಾಬಾದ್ ನಲ್ಲಿ ಕೂಡ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿಅಶ್ರುವಾಯು ಸಿಡಿಸಿದ್ದಾರೆ.
ಕೆಲವಡೆ ಮಹಿಳೆಯರು ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶದ ಬೆಹ್ರೋಜ್ ಹಾಗೂ ವಡೋದರದಲ್ಲಿ ಕೂಡ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಗುಂಪು ಚದುರಿಸಿದರು.