ರಾಜ್ಯ

ಕಟ್ಟಡ ಕುಸಿತದಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ನೆಲಸಮ …!

ಧಾರವಾಡ: ಇಲ್ಲಿನ ಕುಮಾರೇಶ್ವರನಗರದ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡ ದುರಂತದಲ್ಲಿ 19 ಜನರು ಪ್ರಾಣ ಕಳೆದುಕೊಂಡಿದ್ದರೆ, 57 ಜನ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಅದರಲ್ಲಿ ಮಳಿಗೆ ಖರೀದಿಸಿ, ಹೊಸ ವ್ಯವಹಾರ ಆರಂಭಿಸಿದ್ದ ಅನೇಕರು ತಮ್ಮ ಪ್ರಾಣದ ಜೊತೆಗೆ ಅಲ್ಲಿ ಹೂಡಿಕೆ ಮಾಡಿದ್ದ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

ಪ್ರಾಣ ಕಳೆದುಕೊಂಡು ದಿಕ್ಕು ತೋಚದಂತಾದ ಅನೇಕ ಕುಟುಂಬಗಳು ಒಂದು ಕಡೆ ಆದರೆ ಯಾವುದೇ ಪ್ರಾಣ ಕಳೆದುಕೊಳ್ಳದೆ, ಕೇವಲ ಮಳಿಗೆ ಹಾಗೂ ಮಳಿಗೆಯಲ್ಲಿ ಹೂಡಿಕೆ ಮಾಡಿದ್ದ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿರುವುದು ಇನ್ನೊಂದು ಕಡೆ ಇದೆ.

ಅಂತಹವರ ಸಾಲಿನಲ್ಲಿ ಆ ಬಹುಮಹಡಿ ಕಟ್ಟಡದಲ್ಲಿ ಡಾ. ರಶ್ಮಿ ಪಾಟೀಲ ಅವರು ಕೂಡ ಒಬ್ಬರು. ಅವರು ಮೂಲತಃ ಮಹಾರಾಷ್ಟ್ರದವರಾಗಿದ್ದು, ಸದ್ಯ ಧಾರವಾಡದ ರಾಣಿ ಚೆನ್ನಮ್ಮ ನಗರದಲ್ಲಿ ವಾಸವಾಗಿದ್ದಾರೆ.

ಡಾ. ರಶ್ಮಿ ಪಾಟೀಲ ಅವರು ಈ ಕಟ್ಟಡದಲ್ಲಿ ೩ ಅಂಗಡಿ ಖರೀದಿಸಿದ್ದರು. ಫೆಬ್ರವರಿಯಲ್ಲಿ ಅಂದಾಜು ೬೦ ಲಕ್ಷ ರೂ. ಕೊಟ್ಟು ೮೦೦ ಚ.ಅಡಿಯ ೩ ಅಂಗಡಿ ಖರೀದಿಸಿದ್ದರು. ಆಯುರ್ ಸ್ಪರ್ಶ ಪಂಚಕರ್ಮ ಚಿಕಿತ್ಸಾಲಯ ತೆರೆದಿದ್ದರು.

ಆದರೆ ಆ ಕಟ್ಟಡ ಈಗ ನೆಲಸಮವಾಗಿದೆ. ಚಿಕಿತ್ಸಾಲಯದಲ್ಲಿ ಇಂಟೀರಿಯರ್ ಡಿಸೈನ್ ಹಾಗೂ ವೈದ್ಯಕೀಯ ಚಿಕಿತ್ಸೆ ಸಾಮಗ್ರಿಗಳಿಗೆ ಅಂದಾಜು ೨೪ ಲಕ್ಷ ರೂ. ವ್ಯಯಿಸಿರುವುದಾಗಿ ತಿಳಿಸಿದರು.

ಅಲ್ಲದೆ ೮ ಲಕ್ಷ ರೂ. ಮೌಲ್ಯದ ಮೆಡಿಸಿನ್ ಇತ್ತು. ಈಗ ಎಲ್ಲವೂ ಮಣ್ಣು ಪಾಲಾಗಿದೆ ಎಂದು ಡಾ. ರಶ್ಮಿ ಕಣ್ಣೀರು ಹಾಕಿದರು.

ಒಂದು ರೀತಿಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಎಲ್ಲರೂ ಊಟಕ್ಕೆ ಹೋಗಿದ್ದರು. ಚಿಕಿತ್ಸಾಲಯವು ಪ್ರತಿದಿನ ಮಧ್ಯಾಹ್ನ ೨ ರಿಂದ ೪ ರವರೆಗೆ ಬಿಡುವು ಇರುತ್ತಿತ್ತು. ಹಾಗಾಗಿ ಡಾ. ರಶ್ಮಿ ಹಾಗೂ ಸಹಾಯಕರು ಊಟಕ್ಕೆ ಹೋಗಿದ್ದರು. ಮನೆಗೆ ಹೋದ ಕೆಲ ಹೊತ್ತಿನಲ್ಲೇ ಆಘಾತಕಾರಿ ಸುದ್ದಿ ಬಂದಿದೆ ಎಂದರು.

ದೊಡ್ಡ ದುರಂತದ ಸಂಗತಿಯೆಂದರೆ ಕೋಟ್ಯಾಂತರ ರೂಪಾಯಿ ಕಳೆದುಕೊಂಡ ಅವರು ಅಂದು ಬೆಳಗ್ಗೆ ತಪಾಸಣೆ ನಡೆಸಿದ 35 ಸಾವಿರಕ್ಕೂ ಅಧಿಕ ದುಡ್ಡು ಕಟ್ಟಡದಲ್ಲಿಯೇ ಇತ್ತು. ಕಾರ್ಯಾಚರಣೆ ವೇಳೆ ೨೫೦೦ ರೂ. ನಗದು ಪತ್ತೆಯಾಗಿದ್ದು, ಅದನ್ನು ಸಿಬ್ಬಂದಿ ತಮಗೆ ನೀಡಿದರು. ಆಗ ದಿಕ್ಕೆ ತೋಚದಂತಾಯಿತು ಎಂದರು.

ಕಟ್ಟಡ ಬಿದ್ದ ದಿನದಿಂದ ಅಲ್ಲೇ ಇರುವ ಡಾ. ರಶ್ಮಿ ದಂಪತಿ, ಎಲ್ಲೆಲ್ಲಿ ಅಂಗಡಿಗಳಿದ್ದವು ಎಂಬ ಮಾಹಿತಿಯನ್ನು ರಕ್ಷಣಾ ಪಡೆಗೆ ನೀಡಿದರು

Please follow and like us:

Leave a Reply

Your email address will not be published. Required fields are marked *